ರಾಜ್ಯದ ಮಾನವನ್ನು ರಾಷ್ಟ್ರಮಟ್ಟದಲ್ಲಿ ಹರಾಜಾಕಿರುವ ರಮೇಶ್ ಜಾರಕಿಹೊಳಿ ರಾಸಲೀಲೆ ದೃಶ್ಯ ಎಲ್ಲೆಡೆ ಭಾರಿ ಸಂಚಲನ ಸೃಷ್ಟಿಸಿದೆ. ಇವರ ಪೋಲಿಯಾಟದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ರಾಸಲೀಲೆಗೆ ಒಳಗಾದ ಯುವತಿ ಜೊತೆ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿರುವ ಆಡಿಯೋ ಫುಲ್ ವೈರಲ್ ಆಗಿದ್ದು ಆಡಿಯೋದಲ್ಲಿ ಯುವತಿ ನೆರವು ಕೇಳುವುದು, ಸಚಿವರು ಭರವಸೆ ನೀಡಿರುವುದು ಬಹಿರಂಗವಾಗಿದೆ.
ಕರ್ನಾಟಕದಲ್ಲಿ ಇದ್ದುಕೊಂಡು ಕನ್ನಡಿಗರ ವೋಟ್ ಮೂಲಕವೇ ಗೆದ್ದು ಮಂತ್ರಿಯಾಗಿದ್ದ ಈತ ಕನ್ನಡಿಗರನ್ನೇ ಬೋ* ಮಕ್ಕಳು ಎಂದು ಬೈಯ್ಯುವಷ್ಟು ಸದರ ತಿಳ್ಕೊಂಡಿದ್ದಾನೆಯೇ? pic.twitter.com/WjZ7lKFXgX
— GBKM (@officialGBKM) March 3, 2021
ವಿಶೇಷವಾಗಿ ಬೆಳಗಾವಿಯಲ್ಲಿ ಕನ್ನಡಿಗರು ಹಾಗೂ ಮರಾಠರ ನಡುವಿನ ತಿಕ್ಕಾಟದ ಬಗ್ಗೆಯೂ ಪ್ರಸ್ತಾಪಿಸಿದ್ದು ಕನ್ನಡಿಗರ ವಿರುದ್ಧ ನಾಲಿಗೆ ಹರಿದು ಬಿಟ್ಟಿದ್ದಾರೆ. ಬೆಳಗಾವಿಯಲ್ಲಿ ಕನ್ನಡಿಗರು, ಮರಾಠಿಗರು ನಡೆಸುವ ಜಗಳದ ಬಗ್ಗೆ ಯುವತಿಯ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವ ಅವರು, “ಮರಾಠಿಗರು ಒಳ್ಳೆಯ ಜನ, ಇನ್ನು ಈ ಕನ್ನಡಿಗರು ಬೋ ಮಕ್ಕಳು ಅವರಿಗೆ ಬೇರೆ ಕೆಲಸ ಇಲ್ಲ” ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಇದಲ್ಲದೇ ಬೆಳಗಾವಿಯ ಕುರಿತು ಮಾತನಾಡುತ್ತಾ, ʼಬೆಳಗಾವಿಯು ಒಂದು ರಾಜ್ಯʼ ಎಂದು ಹೇಳಿ ಪ್ರತ್ಯೇಕ ರಾಜ್ಯಕ್ಕೆ ಬೆಂಬಲ ನೀಡುವ ಮಾತುಗಳನ್ನಾಡಿದ್ದಾರೆ.. ಈ ಮೂಲಕ ತಾನೊಬ್ಬ ದೊಡ್ಡ ನಾಡ ದ್ರೋಹಿ ಎಂದು ರಮೇಶ್ ಜಾರಕಿಹೋಳಿ ಸಾಬೀತು ಮಾಡಿದ್ದಾರೆ. ಸದ್ಯ ಕನ್ನಡಿಗರ ಬಗ್ಗೆ ಅವಾಚ್ಯ ಶಬ್ದ ಬಳಕೆ ಮಾಡಿರುವ ರಮೇಶ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಖಂಡನೆ ವ್ಯಕ್ತವಾಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
