fbpx
ಸಮಾಚಾರ

ರಾಜೀನಾಮೆ ಪತ್ರದಲ್ಲಿ ಯಡಿಯೂರಪ್ಪ ಬಳಿ ರಮೇಶ್ ಜಾರಕಿಹೊಳಿ ಮಾಡಿಕೊಂಡ ಮನವಿ ಏನು?

ಕೆಲಸ ಕೇಳಿ ಬಂದಿದ್ದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದಡಿ ಸಿಡಿ ವಿವಾದದಲ್ಲಿ ಸಿಲುಕಿದ್ದ ಸಚಿವ ರಮೇಶ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪಂಚ ರಾಜ್ಯಗಳ ಚುನಾವಣೆ ಮೇಲೆ ಪರಿಣಾಮ ಹಾಗೂ ಅಧಿವೇಶನದಲ್ಲಿ ಮುಜುಗರಕ್ಕೀಡಾಗುವುದನ್ನು ತಪ್ಪಿಸುವ ಸಲುವಾಗಿ ಬಿಜೆಪಿ ನಾಯಕರು ರಮೇಶ್ ಜಾರಕಿಹೊಳಿಯನ್ನು ರಾಜೀನಾಮೆ ನೀಡಲು ಮನವೊಲಿಸಿದ್ದಾರೆ. ನಿನ್ನ ಸ್ಥಾನ ನಿಮ್ಮ ಸಹೋದರನಿಗೆ ನೀಡಲಾಗುವುದು ಹಾಗೂ ಪಕ್ಷದ ಒಳಗೇ ನಿಮ್ಮ ಸ್ಥಾನಕ್ಕೆ ತೊಂದರೆ ಆಗುವುದಿಲ್ಲ ಎಂದು ಜಾರಕಿಹೊಳಿಗೆ ಬಿಜೆಪಿ ನಾಯಕರು ಭರವಸೆ ನೀಡಿದ್ದಾರೆ. ನಾಯಕರ ಸೂಚನೆಗೆ ಮನ್ನಣೆ ನೀಡಿ ಸದ್ಯ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ.

 

 

ರಾಜೀನಾಮೆ ಪತ್ರದಲ್ಲಿ ವಿನಂತಿ:
ನನ್ನ ಮೇಲೆ ಬಂದಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಇದರ ಬಗ್ಗೆ ಶೀಘ್ರದಲ್ಲೆ ತನಿಖೆ ಆಗಬೇಕು. ನಾನು ನಿರ್ದೋಶಿಯಾಗುವ ವಿಶ್ವಾಸವಿದ್ದರೂ ನೈತಿಕ ಹೊಣೆಯನ್ನು ಹೊತ್ತು ನಾನು ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿರುತ್ತೇನೆ. ದಯವಿಟ್ಟು ಇದನ್ನು ಅಂಗೀಕರಿಸಬೇಕೆಂದು ರಾಜೀನಾಮೆ ಪತ್ರದಲ್ಲಿ ರಮೇಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ವಿನಂತಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top