fbpx
ಸಮಾಚಾರ

“ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ” ಸಿಡಿ ಬಗ್ಗೆ ರಮೇಶ್ ಜಾರಕಿಹೊಳಿ ಹೇಳಿದ್ದೇನು?

ಕರ್ನಾಟಕ ರಾಜಕೀಯದಲ್ಲಿ ಇದೀಗ ರಾಸಲೀಲೆ ದೃಶ್ಯ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಬಿಜೆಪಿ ಸರ್ಕಾರದ ಸಚಿವ ರಮೇಶ್ ಜಾರಕಿಹೊಳಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಯುವತಿ ಜೊತೆಗಿನ ರಾಸಲೀಲೆ ವಿಡಿಯೋದಲ್ಲಿ ಹಲವು ರಾಜಕೀಯ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಇದೀಗ ರಾಸಲೀಲೆ ವಿಡಿಯೋ ಕುರಿತ ಮೊದಲ ಬಾರಿಗೆ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ನಾನು ಯಾವ ತಪ್ಪೂ ಮಾಡಿಲ್ಲ. ತಪ್ಪಿತಸ್ಥ ಎಂದು ದೃಢಪಟ್ಟರೆ ಆಗ ರಾಜೀನಾಮೆಯ ಪ್ರಶ್ನೆ ಉದ್ಭವಿಸುತ್ತದೆ. ರಾಸಲೀಲೆ ವಿಡಿಯೋ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದರು. ನನ್ನ ವಿರುದ್ಧ ಯಾರೋ ಈ ಷಡ್ಯಂತ್ರ ಮಾಡಿದ್ದಾರೆ ಎಂಬುದರ ಬಗ್ಗೆಯೂ ನಾನು ಆರೋಪ ಮಾಡುವುದಿಲ್ಲ. ಯಾರ ಮೇಲೆಯೂ ನನಗೆ ಅನುಮಾನವೂ ಇಲ್ಲ. ಕಳೆದ 21 ವರ್ಷಗಳಿಂದ ನಾನು ಶಾಸಕನಾಗಿ ಸಾರ್ವಜನಿಕರ ಸೇವೆ ಮಾಡುತ್ತಿದ್ದೇನೆ. ಅತ್ಯಂತ ಸೂಕ್ಷ್ಮ ಮನಸ್ಥಿತಿಯ ಮನುಷ್ಯ ನಾನು ಎಂದು ಹೇಳಿದರು.

ನಾನು ಅತ್ಯಂತ ಸೂಕ್ಷ್ಮ ಮನಸ್ಥಿತಿಯ ಮನುಷ್ಯ. ಧಾರ್ಮಿಕವಾಗಿ ನಂಬಿಕೆಯುಳ್ಳವನು. ನಮ್ಮದು ಅತ್ಯಂತ ದೊಡ್ಡ ಕುಟುಂಬ. ಕಳೆದ 21 ವರ್ಷದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಸಿಡಿ ಹಿಂದೆ ಯಾರದೋ ಕೈವಾಡವಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಫೋನ್ ಮಾಡಿ ಮನವಿ ಮಾಡಿರುವುದಾಗಿ ತಿಳಿಸಿದರು.

ನಾನು ತಪ್ಪೇ ಮಾಡಿಲ್ಲ. ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ನಾವು ಯಾವುದಕ್ಕೂ ಹೆದರೋದಿಲ್ಲ, ಸತ್ಯ ಗೊತ್ತಾಗುತ್ತದೆ. ಒಂದು ವೇಳೆ ತಾನು ತಪಿತಸ್ಥ ಎಂಬುದು ತನಿಖೆಯಿಂದ ತಿಳಿದುಬಂದರೆ, ಸಚಿವ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದು ಜಾರಕಿಹೊಳಿ ಹೇಳಿದರು.

ಅತ್ತ, ರಾಜೀನಾಮೆ ನೀಡಲು ಸ್ವಪಕ್ಷೀಯರಿಂದಲೇ ಒತ್ತಡ ಬರುವ ಸಾಧ್ಯತೆಯಿದೆ. ಹಾಗಾಗಿ, ವರಿಷ್ಠರ ಬುಲಾವ್ ಮೊದಲೇ ದೆಹಲಿಗೆ ತೆರಳಲು ಸಚಿವ ರಮೇಶ್​ ಜಾರಕಿಹೊಳಿ ಚಿಂತನೆ ನಡೆಸಿದ್ದಾರೆ. ಮೊದಲೇ ದೆಹಲಿಯತ್ತ‌ ತೆರಳಲು ಸಚಿವ ರಮೇಶ್ ಚಿಂತನೆ ನಡೆಸಿದ್ದಾರೆ. ಹೀಗಾಗಿ, ರಮೇಶ್​ ನಡೆ ಇನ್ನೂ ಸ್ಪಷ್ಟ ರೂಪ ಪಡೆದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top