fbpx
ಸಮಾಚಾರ

ಸದನದಲ್ಲಿ ಶರ್ಟ್ ಬಿಚ್ಚಿದ ಕಾಂಗ್ರೆಸ್ ಶಾಸಕ: ಸ್ಪೀಕರ್ ಕೆಂಡಾಮಂಡಲ

ರಾಜ್ಯ ಬಜೆಟ್ ಅಧಿವೇಶನ ಇಂದಿಂದ (ಗುರುವಾರ) ಆರಂಭಗೊಂಡಿದ್ದು ಸದನ ಕದನಕ್ಕೆ ಆಡಳಿತ ಹಾಗೂ ವಿರೋಧ ಪಕ್ಷಗಳು ಸಜ್ಜಾಗಿವೆ. ಈಗಾಗಲೇ ಸದನದಲ್ಲಿ ಚರ್ಚೆ ಆರಂಭಗೊಂಡಿದ್ದು, ಇಂದು ಸದನದ ಗೌರವಕ್ಕೆ ಧಕ್ಕೆ ತರುವಂತಹ ಸನ್ನಿವೇಶ ನಡೆದಿದೆ.

ಒನ್ ನೇಷನ್ ಒನ್ ಎಲೆಕ್ಷನ್​ ಕುರಿತು ಚರ್ಚೆಗೆ ವಿರೋಧಿಸಿದ ವಿಪಕ್ಷದವರು ಸ್ಪೀಕರ್​ ಮೇಲೆ ಪೇಪರ್​ ಎಸೆದು ಗರಂ ಆದರು. ಒನ್ ನೇಷನ್ ಒನ್ ಎಲೆಕ್ಷನ್ ಚರ್ಚೆಯನ್ನು ತೀವ್ರವಾಗಿ ವಿರೋಧಿಸಿದ ಕಾಂಗ್ರೆಸ್​ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಪ್ರತಿಭಟನೆ ಮಾಡಿದರು.

ಈ ಘಟನೆಗೆ ಗರಂ ಆದ ಸ್ಪೀಕರ್, “ಸದನ ಅಂದ್ರೆ ಏನ್​ ಅನ್ಕೊಂಡಿದ್ದೀರಿ? ಸದನ ಅಂದ್ರೆ ತಮಾಷೆ ಮಾಡ್ತೀರಾ? ಈ ಮೂಲಕ ಕ್ಷೇತ್ರದ ಜನತೆಗೆ ಅಗೌರವ ತಂದಿದ್ದೀರಿ. ಭದ್ರಾವತಿ ಈ ರೀತಿ ಮಾಡಿದ್ರೆ ಕ್ರಮ ಕೈಗೊಳ್ತೀವಿ. ಸಭ್ಯತೆ ಮರೆತು ವರ್ತಿಸಿದ್ದೀರಿ” ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top