fbpx
ಸಮಾಚಾರ

ಸ್ಪಿನ್ನರ್ ಹರ್ಭಜನ್​ ಸಿಂಗ್ ಈಗ ಸಿನಿಮಾ ಹೀರೋ: ಹಿಟ್ ಆಯ್ತು ಮೊದಲ ಸಿನಿಮಾ ಟೀಸರ್

ತಮ್ಮ ಆಫ್ ಸ್ಪಿನ್​ ಬೌಲಿಂಗ್​ನಿಂದ ಘಟಾನುಘಟಿ ಬ್ಯಾಟ್ಸ್​ಮನ್ಸ್ ನಿದ್ದೆಗೆಡಿಸಿದ್ದ ಹರ್ಭಜನ್ ಸಿಂಗ್ ಈಗ ಸಿಲ್ವರ್ ಸ್ಕ್ರೀನ್​ ಮೇಲೆ ದರ್ಬಾರ್​ ಮಾಡೋಕೆ ಬರ್ತಿದ್ದಾರೆ. ಹೌದು, ತಮಿಳಿನ ಫ್ರೆಂಡ್​ಶಿಪ್​ ಎಂಬ ಚಿತ್ರದಲ್ಲಿ ಲೀಡ್​ ರೋಲ್​ನಲ್ಲಿ ಹರ್ಭಜನ್​ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದುಕೊಂಡಿದೆ.

 

 

ತಮ್ಮ ಸಿನಿಮಾ ಫ್ರೆಂಡ್​ಶಿಪ್ ಟೀಸರ್ ಶೇರ್ ಮಾಡಿಕೊಂಡಿದ್ದಾರೆ ಹರ್ಭಜನ್. ಭಾರತದ ಹಿರಿಯ ಕ್ರಿಕೆಟರ್‌ನ ಮೊದಲ ಸಿನಿಮಾ ಇದು. ಮೂರು ಭಾಷೆಯಲ್ಲಿ ಸಿದ್ಧವಾದ ಸಿನಿಮಾದಲ್ಲಿ ಹರ್ಭಜನ್ ಸಿಂಗ್ನನ್ನು ನಟನಾಗಿ ನೋಡಲಿದ್ದಾರೆ ಜನ. ಮೊದಲ ಚಿತ್ರದಲ್ಲೇ ಆ್ಯಕ್ಷನ್​, ಡ್ಯಾನ್ಸ್​ ಮಾಡಿ ಭಜ್ಜಿ ಕಮಾಲ್ ಮಾಡಿದ್ದಾರೆ. ಖ್ಯಾತ ಕ್ರಿಕೆಟಿಗರು ಈ ಟೀಸರ್ ಅನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡು ಹರ್ಭಜನ್ ಸಿಂಗ್ ಅವರಿಗೆ ಶುಭಕೋರಿದ್ದಾರೆ.

 

 

ಇನ್ನು ಫ್ರೆಂಡ್​ಶಿಪ್ ಸಿನಿಮಾ ಇಂಜಿನಿಯರಿಂಗ್​ ಕಾಲೇಜ್ ಬ್ಯಾಕ್​ಡ್ರಾಪ್​ನಲ್ಲಿ ನಡೆಯೋ ಚಿತ್ರದಲ್ಲಿ ಪ್ರೀತಿ ಸ್ನೇಹದ ಕಥೆ ಹೇಳಲಾಗ್ತಿದೆ. ಜಾನ್​ ಪೌಲ್​ ರಾಜ್​ ಮತ್ತು ಶ್ಯಾಮ್ ಸೂರ್ಯ ಈ ಕಾಲೇಜ್​ ಡ್ರಾಮಾಗೆ ಆ್ಯಕ್ಷನ್ ಕಟ್​ ಹೇಳ್ತಿದ್ದಾರೆ. ಚಿತ್ರದಲ್ಲಿ ಆ್ಯಕ್ಷನ್​ ಕಿಂಗ್​ ಅರ್ಜುನ್ ಸರ್ಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top