fbpx
ಸಮಾಚಾರ

ಅಮ್ಮ ಆಗ್ತಿದ್ದಾರೆ ಗಾಯಕಿ ಶ್ರೇಯಾ ಘೋಷಾಲ್: ಮೊದಲ ಮಗುವಿನ ನಿರೀಕ್ಷೆಯಲ್ಲಿ ಗಾನಕೋಗಿಲೆ

ತಮ್ಮ ಇಂಪಾದ ಕಂಠದ ಮೂಲಕವೇ ಪ್ರಪಂಚದಾದ್ಯಂತ ಸಂಗೀತ ಪ್ರೇಮಿಗಳ ಮನಸ್ಸು ಗೆದ್ದಿರುವ ಪ್ರತಿಭಾನ್ವಿತ ಗಾಯಕಿ ಶ್ರೇಯಾ ಘೋಷಾಲ್ ಅಭಿಮಾನಿಗಳೊಂದಿಗೆ ಸಿಹಿ ಸಮಾಚಾರವೊಂದನ್ನು ಹಂಚಿಕೊಂಡಿದ್ದಾರೆ. ತಾವು ತಾಯಿಯಾಗುತ್ತಿರುವ ವಿಚಾರವನ್ನು ಶ್ರೇಯಾ ಘೋಷಾಲ್ ತಿಳಿಸಿದ್ದಾರೆ.

 

 

ಆರು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಶ್ರೇಯಾ ಘೋಷಾಲ್ ಮತ್ತು ಶಿಲಾದಿತ್ಯ ಮುಖೋಪಾಧ್ಯಾಯ ದಂಪತಿ ಇದೀಗ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಶ್ರೇಯಾ ಘೋಷಾಲ್ ಗರ್ಭಿಣಿ ಆಗಿದ್ದಾರೆ. ಈ ವಿಚಾರವನ್ನು ಖುದ್ದು ಶ್ರೇಯಾ ಘೋಷಾಲ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಬಹಿರಂಗ ಪಡಿಸಿದ್ದಾರೆ.

 

 

 

ಬೇಬಿ ಶ್ರೇಯಾದಿತ್ಯ ನಿರೀಕ್ಷೆಯಲ್ಲಿದ್ದೇವೆ. ಶಿಲಾದಿತ್ಯ ಮತ್ತು ನಾನು ಈ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ರೋಮಾಂಚನಗೊಂಡಿದ್ದೇವೆ. ನಮ್ಮ ಜೀವನದಲ್ಲಿ ಹೊಸ ಅಧ್ಯಾಯಕ್ಕೆ ನಾವು ಸಿದ್ಧರಾಗಿರುವಾಗ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಗಳು ಬೇಕು ಎಂದು ಬರೆದುಕೊಂಡು ಬೇಬಿ ಬಂಪ್ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಸೂಪರ್ ಹಿಟ್ ಗೀತೆಗಳಿಗೆ ದನಿಯಾಗಿರುವ ಶ್ರೇಯಾ ಘೋಷಾಲ್ ಗುಡ್ ನ್ಯೂಸ್ ನೀಡಿದ್ದಾರೆ. ಶ್ರೇಯಾ ಘೋಷಾಲ್ ಗರ್ಭಿಣಿ ಆಗಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಶ್ರೇಯಾ ಘೋಷಾಲ್-ಶಿಲಾದಿತ್ಯ ದಂಪತಿ ಎಷ್ಟು ತಿಂಗಳ ಗರ್ಭಿಣಿ ಎಂಬುದನ್ನು ಬಹಿರಂಗಪಡಿಸಿಲ್ಲ. ಆದರೆ ಶ್ರೇಯಾ ಅವರ ಈ ಪೋಸ್ಟ್ ನೋಡಿ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.

ಅಂದ್ಹಾಗೆ, ಶ್ರೇಯಾ ಘೋಷಾಲ್ ಮತ್ತು ಶಿಲಾದಿತ್ಯ ಮುಖೋಪಾಧ್ಯಾಯ 2015 ರ ಫೆಬ್ರವರಿ ತಿಂಗಳಲ್ಲಿ. ಸಾಂಪ್ರದಾಯಿಕ ಬಂಗಾಳಿ ಶೈಲಿಯಲ್ಲಿ ಶ್ರೇಯಾ ಮತ್ತು ಶಿಲಾದಿತ್ಯ ವಿವಾಹ ಮಹೋತ್ಸವ ನಡೆಯಿತು. ಅಷ್ಟಕ್ಕೂ, ಇವರಿಬ್ಬರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮದುವೆಗೂ ಮುನ್ನ ಹತ್ತು ವರ್ಷಗಳ ಕಾಲ ಶ್ರೇಯಾ ಮತ್ತು ಶಿಲಾದಿತ್ಯ ಪ್ರೀತಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top