fbpx
ಸಮಾಚಾರ

ಬುಮ್ರಾಗೆ ಕೂಡಿಬಂತು ಕಂಕಣ ಭಾಗ್ಯ: ಈ ವಾರವೇ ಜಸ್ಪ್ರೀತ್​ ಬೂಮ್ರಾ ಮದುವೆ? ವಧು ಯಾರು ಗೊತ್ತಾ?

ಕ್ರಿಕೆಟ್​ ವೇಗಿ ಜಸ್​​ಪ್ರೀತ್ ಬೂಮ್ರಾ ವೈಯಕ್ತಿಕ ಕಾರಣ ನೀಡಿ ಇಂಗ್ಲೆಂಡ್ ವಿರುದ್ದದ​ ನಾಲ್ಕನೇ ಟೆಸ್ಟ್​ನಿಂದ ಹೊರಗುಳಿದಿದ್ದಾರೆ. ಮೂಲಗಳ ಪ್ರಕಾರ ಜಸ್​ಪ್ರೀತ್​​ ಬೂಮ್ರಾ ಈ ವಾರ ಗೋವಾದಲ್ಲಿ ವಿವಾಹ ಆಗಲಿದ್ದಾರಂತೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಇಷ್ಟೇ ಅಲ್ಲ, ಆ ಹುಡುಗಿ ಯಾರು ಎನ್ನುವ ಬಗ್ಗೆಯೂ ಚರ್ಚೆ ಜೋರಾಗಿದೆ. ಹಾಗಾದರೆ, ಜಸ್​ಪ್ರೀತ್​ ಬೂಮ್ರಾ ಯಾರನ್ನು ವರಿಸುತ್ತಿದ್ದಾರೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಆದರೆ ಟೀಮ್ ಇಂಡಿಯಾದ ಈ ಖ್ಯಾತ ಬೌಲರ್‌ನನ್ನು ವರಿಸಲಿರುವ ಆ ವಧು ಯಾರು ಎಂಬುದು ಪ್ರಶ್ನೆಯಾಗಿದೆ. ಈ ಹಿಂದೆ ಜಸ್ಪ್ರೀತ್ ಬೂಮ್ರಾ ಜೊತೆಗೆ ಹಲವು ಹೆಸರುಗಳು ಕೇಳಿ ಬಂದಿತ್ತು. ಅದರಲ್ಲಿ ದಕ್ಷಿಣ ಭಾರತದ ನಟಿಯ ಹೆಸರು ಹಾಗೂ ಟಿವಿ ನಿರೂಪಕಿಯೊಬ್ಬರು ಹೆಸರು ಪ್ರಮುಖವಾಗಿದೆ.

ಹುಡುಗಿ ಯಾರು?:
ಮೂಲಗಳ ಪ್ರಕಾರ ಬೂಮ್ರಾ ಮದುವೆ ಆಗುತ್ತಿರುವುದು ಖಾಸಗಿ ಸ್ಪೋರ್ಟ್ಸ್​​ ವಾಹಿನಿಯ ಆ್ಯಂಕರ್​ ಸಂಜನಾ ಗಣೇಶನ್​ ಜತೆ ಎನ್ನಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡಿವೆ. ಆದರೆ, ಈ ಬಗ್ಗೆ ಬೂಮ್ರಾ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

ಅಂದ ಹಾಗೆ ಬೂಮ್ರಾ ವರಿಸಲಿರುವ ವಧು ಯಾರು ಹಾಗೂ ಮದುವೆ ಯಾವಾಗ ನಡೆಯಲಿದೆ ಎಂಬುದಕ್ಕೆ ಸಂಬಂಧಿಸಿದಂತೆ ವಿವರಗಳು ಇನ್ನಷ್ಟೇ ಹೊರಬರಬೇಕಿದೆ. ಈ ಹಿಂದೆ ಕೇರಳ ನಟಿ ಅನುಪಮಾ ಪರಮೇಶ್ವರನ್ ಜೊತೆ ಜಸ್‌ಪ್ರೀತ್ ಬೂಮ್ರಾ ಡೇಟಿಂಗ್‌ನಲ್ಲಿದ್ದಾರೆ ಎಂಬ ಬಗ್ಗೆ ಸುದ್ದಿಗಳು ಹರಡಿದ್ದವು. ನಟಸಾರ್ವಭೌಮ ಚಿತ್ರದಲ್ಲೂ ಅನುಪಮಾ ಅಭಿನಯಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top