fbpx
ಸಮಾಚಾರ

ನಿಧಿ ಸುಬ್ಬಯ್ಯ ಮನೆಗೆ ಪಟಾಕಿ ಎಸೆದಿದ್ದರಂತೆ ಯಶ್‌: ರಾಕಿಂಗ್ ಸ್ಟಾರ್ ಕೊಟ್ಟಿದ್ದ ತೊಂದರೆ ನೆನಪಿಸಿಕೊಂಡ ನಟಿ

ನಿಧಿ ಸುಬ್ಬಯ್ಯ ‘ಬಿಗ್ ಬಾಸ್’ ಮನೆಯಲ್ಲಿ ಬಂಧಿಯಾಗಿರುವುದು ನಿಮಗೆಲ್ಲ ಗೊತ್ತೇ ಇದೆ. ‘ಬಿಗ್ ಬಾಸ್’ ಮನೆಯಲ್ಲಿ ಸದ್ಯ ಉತ್ತಮವಾಗಿ ಆಟ ಆಡುತ್ತಿರುವ ನಿಧಿ ಸುಬ್ಬಯ್ಯ ತಮ್ಮ ಕಾಲೇಜು ದಿನಗಳಲ್ಲಿ ನಡೆದ ಒಂದು ರೋಚಕ ಘಟನೆಯನ್ನು ಬಹಿರಂಗ ಪಡಿಸಿದ್ದಾರೆ.

ನಿಧಿ ಅವರು ಮೈಸೂರಿನಲ್ಲಿ ಅವರ ತಾತನೊಂದಿಗೆ ವಾಸವಿದ್ದರಂತೆ. ತಾತನ ರೂಂ ಗ್ರೌಂಡ್‌ಫ್ಲೋರ್‌ನಲ್ಲಿದ್ದರೆ, ನಿಧಿಯ ರೂಮು ಮೇಲೆ ಇತ್ತಂತೆ. ಒಂದು ರಾತ್ರಿ ಇದ್ದಕ್ಕಿದ್ದಂತೆ ಯಾರೋ ನಿಧಿಯ ಮನೆ ಗೆ ಪಟಾಕಿ ಎಸೆದು ಹೋದರಂತೆ.

ನಿಧಿ ಹಾಗೂ ಅವರ ತಾತ ಬಹಳ ಗಾಬರಿಯಿಂದ ಹೊರಬಂದರೆ ನಾಲ್ಕು ಬೈಕ್‌ಗಳು ಹೋಗಿದ್ದಷ್ಟೆ ಕಾಣಿಸಿದುವಂತೆ. ನಿಧಿ ಅವರು ಪೊಲೀಸರನ್ನೆಲ್ಲಾ ಕರೆಸಿ ವಿಷಯ ತಿಳಿಸಿದ್ದರಂತೆ. ಈ ಘಟನೆ ಆದ ಬಳಿಕ ನಿಧಿ ಸಿನಿಮಾ ಉದ್ಯಮಕ್ಕೆ ಬಂದಿದ್ದಾರೆ. ಒಮ್ಮೆ ಮೈಸೂರಿನಲ್ಲಿ ಪೊಲೀಸರಿಗಾಗಿ ವಿಶೇಷ ಶೋ ಮಾಡುತ್ತಿದ್ದಾಗ. ನಟರೊಬ್ಬರು ನಿಧಿ ಬಳಿ ಬಂದು, ನಿಮ್ಮಲ್ಲಿ ಕ್ಷಮೆ ಕೇಳಬೇಕು, ಒಮ್ಮೆ ನಿಮ್ಮ ಮನೆಗೆ ಪಟಾಕಿ ಎಸೆದಿದ್ದು ನೆನಪಿದಿಯೇ ಎಂದು ಕೇಳಿದರಂತೆ.

ಅಂದ್ಹಾಗೇ, ಅಂದು ನಿಧಿ ಸುಬ್ಬಯ್ಯ ಮನೆಗೆ ಪಟಾಕಿ ಹಾಕಿದವರು ಯಾರು ಗೊತ್ತಾ? ಇವತ್ತಿನ ರಾಕಿಂಗ್‌ ಸ್ಟಾರ್ ಯಶ್‌.. ಅವತ್ತಿನ ನವೀನ್ ಗೌಡ. ಈ ವಿಚಾರವನ್ನ ಸ್ವತಃ ಯಶ್‌ ನಿಧಿ ಸುಬ್ಬಯ್ಯ ಅವ್ರಿಗೆ ಹೇಳಿದ್ದರಂತೆ. ಜೊತೆಗೆ ಒಂದು ಸಂದರ್ಶನದಲ್ಲಿ ಈ ವಿಚಾರ ಹೇಳಿದ್ದರಂತೆ. ಈ ಘಟನೆಯನ್ನ ನಿಧಿ ಸುಬ್ಬಯ್ಯ ಬಿಗ್‌ಬಾಸ್ ಸ್ಪರ್ಧಿಗಳಿಗೆ ಹೇಳಿ ಎಲ್ಲರನ್ನ ಆಶ್ಚರ್ಯಚಕಿತಗೊಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top