fbpx
ಸಮಾಚಾರ

ದುಬೈನಲ್ಲಿ 24 ಕೋಟಿ ರೂ. ಲಾಟರಿ ಗೆದ್ದ ಶಿವಮೊಗ್ಗದ ವ್ಯಕ್ತಿ: ಗೆದ್ದ ಹಣದಲ್ಲಿ ಏನು ಮಾಡಲಿದ್ದಾರೆ ಗೊತ್ತಾ?

ಅದೃಷ್ಟ ಯಾವಾಗ ಬೇಕಾದರೂ ಯಾರ ಪಾಲಾಗಬಹುದು. ಅಂತಹದೊಂದು ಅದೃಷ್ಟ ಇದೀಗ ಕಷ್ಟಪಟ್ಟು ದುಡಿಯುತ್ತಿದ್ದ ವ್ಯಕ್ತಿಯ ಪಾಲಾಗಿದೆ. ಹೌದು, ಕಳೆದ ಹದಿನೈದು ವರ್ಷಗಳಿಂದ ದುಬೈನಲ್ಲಿ ಕಷ್ಟಪಡುತ್ತ ಬಿಸಿಲು-ಧೂಳು ಎನ್ನದೆ ಕುಟುಂಬಕ್ಕಾಗಿ ಶ್ರಮಿಸುತ್ತಿದ್ದ ಶಿವಮೊಗ್ಗ ಮೂಲದ ವ್ಯಕ್ತಿಗೆ ಲಾಟರಿ ಮೂಲಕ ಅದೃಷ್ಟದ ಬಾಗಿಲು ತೆರೆದಿದೆ.

ಯುಎಇನಲ್ಲಿ ನೆಲೆಸಿರುವ ಕರ್ನಾಟಕದ ಶಿವಮೊಗ್ಗ ಮೂಲದ ಶಿವಮೂರ್ತಿ ಕೃಷ್ಣಪ್ಪ ಎಂಬವರು ಗುರುವಾರ ಬರೋಬ್ಬರಿ 24 ಕೋಟಿ ರು. (12 ಮಿಲಿಯನ್‌ ದಿರಾಮ್‌) ಲಾಟರಿ ಗೆಲ್ಲುವ ಮೂಲಕ ಜಾಕ್‌ಪಾಟ್‌ ಹೊಡೆದಿದ್ದಾರೆ. ಕೃಷ್ಣಪ್ಪ ಅವರು ಕಳೆದ 15 ವರ್ಷದಿಂದ ಯುಎಇನಲ್ಲಿ ನೆಲೆಸಿದ್ದು, ಮೆಕಾನಿಕಲ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಫೆ.17ರಂದು ಕೃಷ್ಣಪ್ಪ 202511 ಸಂಖ್ಯೆಯ ಲಾಟರಿ ಟಿಕೆಟ್‌ ಅನ್ನು ಕೊಂಡುಕೊಂಡಿದ್ದರು. ಈ ಲಾಟರಿ ಕೃಷ್ಣಪ್ಪ ಅವರ ಅದೃಷ್ಟವನ್ನೇ ಬದಲಾಯಿಸಿದೆ.

ಹಣದಿಂದ ಮನೆ ನಿರ್ಮಿಸಲು ಬಯಸುತ್ತೇನೆ
ನಾನು ಗೆದ್ದಿರುವ ಹಣದಿಂದ ನನ್ನ ಕುಟುಂಬಕ್ಕೆ ಮತ್ತೆ ನನ್ನ ಊರಿನಲ್ಲಿ ಒಂದು ದೊಡ್ಡ ಮನೆ ನಿರ್ಮಿಸಲು ನಾನು ಬಯಸುತ್ತೇನೆ. ನನಗೆ 10 ಮತ್ತು 4 ವರ್ಷ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ.ಆದ್ದರಿಂದ ಹಣದ ಹೆಚ್ಚಿನ ಭಾಗವನ್ನು ಅವರ ಭವಿಷ್ಯಕ್ಕಾಗಿ ಠೇವಣಿ ಇಡಲಾಗುತ್ತದೆ ಎಂದು ಅವರು ಹೇಳಿದರು.

ಮೂರು ವರ್ಷಗಳಿಂದ ಪ್ರತಿ ತಿಂಗಳು ಟಿಕೆಟ್ ಖರೀದಿ
ಕಳೆದ ಒಂದು ವರ್ಷದಿಂದ ನಾನು ಸ್ವಂತವಾಗಿ ಟಿಕೆಟ್ ಖರೀದಿಸುತ್ತಿದ್ದೇನೆ. ಸಾಮಾನ್ಯ ಟಿಕೆಟ್ ಖರೀಧಿದಾರರಿಗೆ ಸಂಘಟಕರು ವಿಶೇಷ ಕೊಡುಗೆ ನೀಡಿದ್ದರಿಂದ ಈ ಬಾರಿ ನಾನು ಎರಡು ಟಿಕೆಟ್ ಖರೀದಿಸಿದೆ ಎಂದು ಅವರು ಹೇಳಿದರು. ಈ ಹಿಂದೆ ಹಲವಾರು ಭಾರತೀಯರು ಸಹ ಈ ಬಹುಮಾನ ಗೆದ್ದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top