fbpx
ಸಮಾಚಾರ

IPL 2021 ವೇಳಾಪಟ್ಟಿ ಪ್ರಕಟ: RCB ಅಭಿಮಾನಿಗಳಿಗೆ ಭಾರಿ ನಿರಾಸೆ

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಸಲುವಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಅಧಿಕೃತವಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನಿರೀಕ್ಷೆಯಂತೆ ಆರು ನಗರಗಳಿಗೆ ಆತಿಥ್ಯ ನೀಡಿದೆ.

ಏಪ್ರಿಲ್‌ 9ರಿಂದ ಮೇ 30ರವರೆಗೆ ಟೂರ್ನಿ ನಡೆಯಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಮತ್ತು ಕಳೆದ ಬಾರಿ ನಾಕ್‌ಔಟ್‌ ಸಾಧನೆ ಮಾಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಚೆನ್ನೈನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಸೇರಿದಂತೆ ಎಲ್ಲ ಎಂಟು ತಂಡಗಳು ತನ್ನ ‘ಹೋಮ್’ ಹಾಗೂ ‘ಅವೇ’ ಪಂದ್ಯಗಳನ್ನು ತಣಸ್ಥ ತಾಣಗಳಲ್ಲಿ ಆಡಲಿವೆ. ಇದರಿಂದಾಗಿ ಬೆಂಗಳೂರಿನ ಪಂದ್ಯಗಳನ್ನು ಚಿನ್ನಸ್ವಾಮಿ ಮೈದಾನದಲ್ಲಿ ನೋಡುವ ಆರ್‌ಸಿಬಿ ಅಭಿಮಾನಿಗಳ ಕನಸಿಗೆ ಹಿನ್ನೆಡೆಯಾಗಿದೆ.  ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿ 10 ಐಪಿಎಲ್ ಪಂದ್ಯಗಳು ನಡೆಯಲಿದೆ. ಆದರೆ ತವರಿನ ಆರ್‌ಸಿಬಿ ತಂಡಕ್ಕೆ ಒಂದೇ ಒಂದು ಪಂದ್ಯವಿಲ್ಲ ಅನ್ನೋದು ಅಭಿಮಾನಿಗಳಿಗೆ ನಿರಾಸೆಯಾಗಿದೆ.

RCB ಸಂಪೂರ್ಣ ವೇಳಾಪಟ್ಟಿ ಇಂತಿದೆ:
ಆರ್‌ಸಿಬಿ vs ಮುಂಬೈ, ಏ.9, ಶುಕ್ರವಾರ, ತಾಣ: ಚೆನ್ನೈ, ಸಮಯ: ರಾತ್ರಿ 7.30ಕ್ಕೆ
ಆರ್‌ಸಿಬಿ vs ಹೈದರಾಬಾದ್, ಏ.14, ಬುಧವಾರ, ತಾಣ: ಚೆನ್ನೈ, ಸಮಯ: ರಾತ್ರಿ 7.30ಕ್ಕೆ
ಆರ್‌ಸಿಬಿ vs ಕೋಲ್ಕತ್ತ, ಏ.18, ಭಾನುವಾರ, ತಾಣ: ಚೆನ್ನೈ, ಸಮಯ: ಸಂಜೆ 3.30ಕ್ಕೆ
ಆರ್‌ಸಿಬಿ vs ರಾಜಸ್ಥಾನ, ಏ.22, ಗುರುವಾರ, ತಾಣ: ಮುಂಬೈ, ಸಮಯ: ರಾತ್ರಿ 7.30ಕ್ಕೆ
ಆರ್‌ಸಿಬಿ vs ಚೆನ್ನೈ, ಏ.25, ಭಾನುವಾರ, ತಾಣ: ಮುಂಬೈ, ಸಮಯ: ಸಂಜೆ 3.30ಕ್ಕೆ

ಆರ್‌ಸಿಬಿ vs ಡೆಲ್ಲಿ, ಏ.27, ಮಂಗಳವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ
ಆರ್‌ಸಿಬಿ vs ಪಂಜಾಬ್, ಏ.30, ಶುಕ್ರವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ
ಆರ್‌ಸಿಬಿ vs ಕೋಲ್ಕತ್ತ, ಮೇ 3, ಸೋಮವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ
ಆರ್‌ಸಿಬಿ vs ಪಂಜಾಬ್, ಮೇ 6, ಗುರುವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ
ಆರ್‌ಸಿಬಿ vs ಹೈದರಾಬಾದ್, ಮೇ 9, ಭಾನುವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ

ಆರ್‌ಸಿಬಿ vs ಡೆಲ್ಲಿ, ಮೇ 14, ಶುಕ್ರವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ
ಆರ್‌ಸಿಬಿ vs ರಾಜಸ್ಥಾನ, ಮೇ 16, ಭಾನುವಾರ, ತಾಣ: ಕೋಲ್ಕತ್ತ, ಸಮಯ: ಸಂಜೆ 3.30ಕ್ಕೆ
ಆರ್‌ಸಿಬಿ vs ಮುಂಬೈ, ಮೇ 20, ಗುರುವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ
ಆರ್‌ಸಿಬಿ vs ಚೆನ್ನೈ, ಮೇ 23, ಭಾನುವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top