fbpx
ಸಮಾಚಾರ

ಚಿರು ಅಣ್ಣನೇ ನನ್ನ ಗುರು: ಚಾಲೆಂಜ್‌ ಸ್ವೀಕರಿಸಿದ ಧ್ರುವ ಸರ್ಜಾ ಉತ್ತರ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾದಲ್ಲಿ ‘ಪಾಠಶಾಲಾ’ ಹಾಡು ರಿಲೀಸ್ ಆಗಿದ್ದು ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈ ಹಾಡು ಎಲ್ಲರ ಗುರುವಿನ ಬಗ್ಗೆ ನಿರ್ಮಣವಾಗಿದೆ. ಇದೇ ಹಿನ್ನೆಲೆಯಲ್ಲಿ ಚಿತ್ರತಂಡ #MyGuru ಅಭಿಯಾನ ಶುರು ಮಾಡಿದ್ದು, ಸಿನಿಮಾ ರಂಗದ ಹಲವು ಗಣ್ಯರು ತಮ್ಮ ಗುರು ಯಾರೆಂದು ಹೇಳುತ್ತಿದ್ದಾರೆ.   ನಿಮ್ಮ ಜೀವನದಲ್ಲಿ ನಿಮ್ಮನ್ನು ಸರಿ ದಾರಿಗೆ ನಡೆಸಿದ ಗುರುವಿನ ಫೋಟೋ ಹಾಕುವ ಮೂಲಕವಾಗಿ ಪರಿಚಯಿಸಬೇಕು ಎಂದು ಹೇಳಿದ್ದರು. ತಮ್ಮ ನೆಚ್ಚಿನ ಗುರುವನ್ನು ಧ್ರುವ ಸರ್ಜಾ ಪರಿಚಯಿಸಿ ಧನ್ಯವಾದ ತಿಳಿಸಿದ್ದಾರೆ.

 

 

ಚಿರಂಜೀವಿ ಸರ್ಜಾ ಜೊತೆಗಿನ ಫೋಟೋವನ್ನು ಶೇರ್ ​ಮಾಡಿಕೊಂಡಿರುವ ಧ್ರುವ ಸರ್ಜಾ, ಅಣ್ಣನೇ ನನ್ನ ಗುರು ಎಂದಿದ್ದಾರೆ. ‘ಬಾಳೆಂಬ ಮೊಳಕೆ ಚಿಗುರೊಡೆಯಲು ಮಳೆಯಾದೆ. ಹೂವಾಗಿ ಅರಳಲು ಸ್ಫೂರ್ತಿಯ ಸೂರ್ಯನಾದೆ. ವೃಕ್ಷವಾಗಿ ಬೆಳೆಯಲು ಆಸರೆಯ ಭೂಮಿಯಾದ ನನ್ನ ಅಣ್ಣ ನನ್ನ ಗುರು’ ಎಂದು ಧ್ರುವ ಟ್ವೀಟ್​ ಮಾಡಿದ್ದಾರೆ. ಶಿವರಾಜ್​ಕುಮಾರ್​ ಮತ್ತು ಪುನೀತ್​ ರಾಜ್​ಕುಮಾರ್​ಗೆ ಅವರು ಚಾಲೆಂಜ್​ ದಾಟಿಸಿದ್ದಾರೆ.

ಯುವರತ್ನ ಸಿನಿಮಾ ತಂಡ ಹಾಕಿರುವ ಚಾಲೆಂಜ್‍ಅನ್ನು ಹಲವು ನಟ ನಟಿಯರು, ನಿರ್ದೇಶಕರು ತಮ್ಮ ನೆಚ್ಚಿನ ಗುರುವನ್ನು ಪರಿಚಯಿಸುವ ಮೂಲಕವಾಗಿ ಜೀವನದಲ್ಲಿ ಹೊಸ ದಾರಿ ತೋರಿಸಿಕೊಟ್ಟ ಗುರುವಿಗೆ ಧನ್ಯವಾದವನ್ನು ಈ ಮೂಲಕವಾಗಿ ಹೇಳುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top