fbpx
ಸಮಾಚಾರ

ಸೂಕ್ತ ಅವಕಾಶ ಸಿಗದೇ ರಸ್ತೆಬದಿಯಲ್ಲಿ ಟೀ ಮಾರುತ್ತಿದ್ದಾರೆ ರಾಷ್ಟ್ರೀಯ ಮಟ್ಟದ ಚೆಸ್ ವಿಜೇತ ಆಟಗಾರ

ಅವಕಾಶಗಳ ಕೊರತೆಯಿಂದಾಗಿ ತಮ್ಮ ಪ್ರತಿಭೆಯನ್ನು ವ್ಯರ್ಥ ಮಾಡಿಕೊಂಡಿರುವ ಸಹಸ್ರಾರು ಉದಾಹರಣೆಗಳು ನಮ್ಮ ದೇಶದಲ್ಲಿ ಸಿಗುತ್ತವೆ. ಅದೇ ರೀತಿ ಅವಕಾಶದಿಂದ ವಂಚಿತರಾಗುತ್ತಿದ್ದವರ ಸಾಲಿಗೆ ಮಧ್ಯಪ್ರದೇಶದ ರಾಷ್ಟ್ರೀಯ ಚೆಸ್ ಆಟಗಾರ ಕುಲದೀಪ್ ಚೌಹಾನ್ ಅವರ ಹೆಸರು ಕೇಳಿ ಬಂದಿದೆ. ರಾಷ್ಟ್ರೀಯ ಚೆಸ್ ಆಟಗಾರ ಕುಲದೀಪ್ ಚೌಹಾನ್ ಅವಕಾಶಗಳ ಕೊರತೆ ಹಾಗೂ ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕಾಲೇಜಿನ ಎದುರು ಚಹಾ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.

 

 

ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ರಾಷ್ಟ್ರೀಯ ಚೆಸ್ ಆಟಗಾರ ಕುಲದೀಪ್ ಚೌಹಾನ್ ಅವರು ಇಂದು ಆಟವನ್ನು ತೊರೆದು ಚಹಾವನ್ನು ರಸ್ತೆಯ ಉದ್ದಕ್ಕೂ ಮಾರಾಟ ಮಾಡುತ್ತಿದ್ದಾರೆ. ತಾವು ಗೆದ್ದಿರುವ ಪದಕಗಳನ್ನ ತೋರಿಸಿ ತಮ್ಮ ಕಷ್ಟದ ಪರಿಸ್ಥಿತಿಯನ್ನು ವಿವರಿಸಿದ್ದಾರೆ

“ನಾನು ಚೆಸ್ ಆಟದಲ್ಲಿ ಮುಂದಿನ ಸಾಧನೆ ಮಾಡಲು ಸಾಕಷ್ಟು ಅವಕಾಶಗಳು ಸಿಗುತ್ತಿಲ್ಲ. ನಮ್ಮ ಮನೆಯ ಪರಿಸ್ಥಿತಿ ಉತ್ತಮವಾಗಿಲ್ಲ ಸಾಕಷ್ಟು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಆದ್ದರಿಂದ ನಾನು ಈ ಕೆಲಸ ಮಾಡುತ್ತಿದ್ದೇನೆ.” ಎಂದು ರಾಷ್ಟ್ರೀಯ ಚೆಸ್ ಆಟಗಾರ ಕುಲದೀಪ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಟ್ವಿಟ್ಟರ್‌ನಲ್ಲಿ ಟೀ ಮಾರುತ್ತಿರುವ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಅವರನ್ನು ಟ್ಯಾಗ್ ಮಾಡಿ ಆಟಗಾರನ ಬಗ್ಗೆ ಗಮನ ಹರಿಸಿ ಸಹಾಯ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top