fbpx
ಸಮಾಚಾರ

ವಾಷಿಂಗ್ಟನ್ ಸುಂದರ್ ಹೆಸರಲ್ಲಿ ‘ವಾಷಿಂಗ್ಟನ್’ ಬಂದಿತ್ತು ಹೇಗೆ ಗೊತ್ತಾ? ಇದರ ಹಿಂದಿದೆ ಸ್ವಾರಸ್ಯಕರ ಕತೆ

ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಟೀಮ್ ಇಂಡಿಯಾದಲ್ಲಿ ತಮ್ಮದೇ ಛಾಪು ಮೂಡಿಸಿರುವ ವಾಷಿಂಗ್ಟನ್ ಸುಂದರ್ ಕಡಿಮೆ ಸಮಯದಲ್ಲಿಯೇ ಎಲ್ಲರ ಗಮನ ಸೆಳೆದಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಟೆಸ್ಟ್ ಸರಣಿಯಲ್ಲಿ ವಾಷಿಂಗ್ಟನ್‌ ಸುಂದರ್‌ ಮೂರು ಪಂದ್ಯಗಳಾಡಿದ್ದು, 181 ರನ್‌ ಹಾಗೂ ಎರಡು ವಿಕೆಟ್‌ ಕಬಳಿಸಿದ್ದಾರೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ 21ರ ಪ್ರಾಯದ ಆಟಗಾರ, ಸರಣಿ ನಿರ್ಣಾಯಕ ದಿ ಗಬ್ಬಾ ಟೆಸ್ಟ್‌ನಲ್ಲಿ ಮೌಲ್ಯಯುತ 82 ರನ್‌ ಹಾಗೂ ನಾಲ್ಕು ವಿಕೆಟ್‌ ಪಡೆದಿದ್ದರು.

ಇದೇ ಹೊತ್ತಿನಲ್ಲಿ ಈ ಹುಡುಗನ ಹೆಸರು ‘ವಾಷಿಂಗ್ಟನ್‌’ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕುತೂಹಲದ ಹುಡುಕಾಟಗಳೂ ನಡೆದವು. ಚೆನ್ನೈನ ಹುಡುಗನಿಗೆ ಈ ಹೆಸರು ಬಂದಿದ್ದಾದರೂ ಹೇಗೆ ಎಂಬ ಶೋಧ ಜೋರಾಗಿಯೇ ನಡೆಯಿತು. ಅವರ ತಂದೆ ಸುಂದರ್, ಮಗನಿಗೆ ವಾಷಿಂಗ್ಟನ್ ಎಂದೇ ನಾಮಕರಣ ಮಾಡಿದ್ದರ ಹಿಂದೆ ಒಂದು ಕಥೆ ಇದೆ. ಏನಂದು ಅಂತೀರಾ? ಮುಂದೆ ಓದಿ

ವಾಷಿಂಗ್ಟನ್ ಸುಂದರ್‌ ಹೆಸರಿನಲ್ಲಿ ‘ವಾಷಿಂಗ್ಟನ್’ ಸೇರಿಸಿದ್ದು ಅವರ ತಂದೆ ಎಂ ಸುಂದರ್. ಎಂ ಸುಂದರ್ ಕೂಡ ಕ್ರಿಕೆಟರೆ. ಆದರೆ ತಮಿಳುನಾಡು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರಲಿಲ್ಲ. ಎಂ ಸುಂದರ್‌ಗೊಬ್ಬರು ಗಾಡ್ ಫಾದರ್ ಇದ್ದರು. ಪಿಡಿ ವಾಷಿಂಗ್ಟನ್ ಅವರು ಹೆಸರು.

ಪಿಡಿ ವಾಷಿಂಗ್ಟನ್ ಒಬ್ಬ ದೊಡ್ಡ ಕ್ರಿಕೆಟ್ ಅಭಿಮಾನಿ. ಸುಂದರ್ ಆಟವನ್ನು ಅವರು ಇಷ್ಟಪಡುತ್ತಿದ್ದರು. ಅಲ್ಲದೆ ಶಾಲಾ ಪುಸ್ತಕಗಳನ್ನು ತೆಗೆದುಕೊಡುತ್ತ, ಶಾಲಾ ಶುಲ್ಕ ಪಾವತಿಸುತ್ತ ಸುಂದರ್‌ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿದ್ದರು. ಇದರಿಂದ ಸುಂದರ್‌ಗೆ ಕ್ರಿಕೆಟ್‌ನಲ್ಲಿ ತೊಡಗಿಕೊಳ್ಳಲೂ ಸಹಾಯವಾಗಿತ್ತು.

1999ರಲ್ಲಿ ಪಿಡಿ ವಾಷಿಂಗ್ಟನ್ ಸಾವನ್ನಪ್ಪಿದರು. ಅದೇ ವರ್ಷ ಅಕ್ಟೋಬರ್‌ನಲ್ಲಿ ಸುಂದರ್‌ಗೆ ಗಂಡು ಮಗು ಜನಿಸಿತು. ತನ್ನ ಗಾಡ್ ಫಾದರ್ ಹೆಸರನ್ನು ತನ್ನ ಪುತ್ರನಿಗಿಡಲು ಸುಂದರ್ ಬಯಸಿದರು. ಹೀಗೆ ವಾಷಿಂಗ್ಟನ್ ಸುಂದರ್‌ ಹೆಸರಿನಲ್ಲಿ ‘ವಾಷಿಂಗ್ಟನ್’ ಸೇರಿಕೊಂಡಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top