fbpx
ಸಮಾಚಾರ

ಬಿಗ್​ಬಾಸ್​ ಸೀಸನ್ 08: ಎರಡನೇ ವಾರದ ಎಲಿಮಿನೇಷನ್​ಗೆ ಬರೋಬ್ಬರಿ 8 ಸದಸ್ಯರು ನಾಮಿನೇಟ್​

ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡದ 8ನೇ ಸೀಸನ್’ಗೆ ಎಂಟ್ರಿ ಕೊಟ್ಟಿದ್ದ ಒಟ್ಟು 17 ಮಂದಿ ಪೈಕಿ ಈಗಾಗಲೇ ಅಧಿಕೃತವಾಗಿ ಮನೆಯ ಮೊದಲ ವಾರದ ಎಲಿಮಿನೇಷನ್ ಆಗಿದ್ದು ಟಿಕ್ ಟಾಕ್ ಸ್ಟಾರ್ ಧನುಶ್ರೀ ಎಲಿಮಿನೇಟ್ ಆಗಿದ್ದಾರೆ. ಅಂತೆಯೇ 2ನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಮತ್ತೆ ಬರೋಬ್ಬರಿ ಎಂಟು ಮಂದಿ ನಾಮಿನೇಟ್ ಆಗುವ ಮೂಲಕ ಮೊದಲ ಕುತೂಹಲ ಕೆರಳಿಸಿದೆ.

ಬಿಗ್‌ಬಾಸ್ ಅವರು ಎಲ್ಲ ಸ್ಪರ್ಧಿಗಳನ್ನು ಸೀಕ್ರೆಟ್ ರೂಂ ಗೆ ಕರೆದು ಒಬ್ಬೊಬ್ಬರು ಮೂವರ ಹೆಸರನ್ನು ನಾಮಿನೇಟ್ ಮಾಡಲು ಹೇಳಿ, ಸೂಕ್ತ ಕಾರಣವನ್ನು ತಿಳಿಸುವಂತೆ ಹೇಳಿದರು. ಅದರಂತೆ ಸ್ಪರ್ಧೆಗಳ ಆಯ್ಕೆಗೆ ಅನುಸಾರ ಎರಡನೇ ವಾರದಲ್ಲಿ, ನಿರ್ಮಲಾ, ಪ್ರಶಾಂತ್ ಸಂಬರ್ಗಿ, ದಿವ್ಯಾ ಸುರೇಶ್, ಗೀತಾ, ನಿಧಿ ಸುಬ್ಬಯ್ಯ, ವಿಶ್ವನಾಥ್, ಚಂದ್ರಕಲಾ ಅವರುಗಳನ್ನು ಈ ವಾರ ನಾಮಿನೇಟ್ ಮಾಡಲಾಯಿತು.

ಆ ನಂತರ ಮನೆಯ ಕ್ಯಾಪ್ಟನ್ ಆಗಿರುವ ಬ್ರೋ ಗೌಡ ಅವರಿಗೆ ಈ 7 ಮಂದಿಯನ್ನು ಹೊರತುಪಡಿಸಿ ಒಬ್ಬ ಸ್ಪರ್ಧಿಯ ಹೆಸರನ್ನು ನೇರವಾಗಿ ನಾಮಿನೇಟ್ ಮಾಡಲು ಹೇಳಲಾಯಿತು. ಅದರಂತೆ ಬ್ರೋ ಗೌಡ ಅವರು ನಟಿ ಶುಭಾ ಪೂಂಜಾ ಹೆಸರನ್ನು ನೇರವಾಗಿ ನಾಮಿನೇಟ್ ಮಾಡಿದರು. ಅಲ್ಲಿಗೆ ಈ ವಾರ ಮನೆಯಿಂದ ಎಲಿಮಿನೇಟ್ ಆಗಲು ಒಟ್ಟು ಎಂಟು ಮಂದಿ ನಾಮಿನೇಷನ್ ಆಗಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top