fbpx
ಸಮಾಚಾರ

ಊಹಾಪೋಹಗಳಿಗೆ ತೆರೆ: ಬಿಜೆಪಿ ಸೇರ್ಪಡೆಗೊಂಡ ಬಾಲಿವುಡ್ ದಿಗ್ಗಜ ನಟ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇಂದು ಬಾಲಿವುಡ್ ಖ್ಯಾತ ನಟ ಮಿಥುನ್ ಚಕ್ರವರ್ತಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಶ್ಚಿಮ ಬಂಗಾಳದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಮಿಥುನ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

 

 

ಇನ್ನು ಕೋಲ್ಕತ್ತಾದ ಬ್ರಿಗೇಡ್ ಗ್ರೌಂಡ್‌ನ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮಿಥುನ್ ಚಕ್ರವರ್ತಿ ‘ನಾನು ನಂಬರ್ ವನ್ ಕೋಬ್ರಾ, ಯಾರಿಗಾದರೂ ಕಚ್ಚಿದರೆ ಅವರು ಫೋಟೋ ಫ್ರೇಮ್ ಆಗಿ ಮಾರ್ಪಾಡಾಗುವುದರಲ್ಲಿ ಅನುಮಾನವಿಲ್ಲ. ನಾನೊಬ್ಬ ಬಂಗಾಳಿಗ ಎನ್ನಲು ನನಗೆ ಹೆಮ್ಮೆಯಾಗುತ್ತದೆ’ ಎಂದಿದ್ದಾರೆ.

70 ವರ್ಷದ ನಟ ಮಿಥುನ್‌ ಚಕ್ರವರ್ತಿ ಅವರು ರಾಜ್ಯದಲ್ಲಿ ಸಾಕಷ್ಟುಅಭಿಮಾನಿಗಳನ್ನು ಹೊಂದಿದ್ದಾರೆ. ಈ ಹಿಂದೆ ಸಿಪಿಎಂಗೆ ಆಪ್ತರಾಗಿದ್ದ ಮಿಥುನ್‌, ಕೆಲಕಾಲ ಟಿಎಂಸಿ ಸಂಸದರಾಗಿ ಶಾರದಾ ಚಿಟ್‌ಫಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದ್ದು, ಬಿಜೆಪಿ ಮತ್ತು ಟಿಎಂಸಿ ನಡುವೆ ನೇರ ಹಣಾಹಣಿ ನಡೆಯಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top