fbpx
ಸಮಾಚಾರ

‘ಕೆಂಪೇಗೌಡ’, ‘ವರದನಾಯಕ’ ಸಿನಿಮಾಗಳ ನಿರ್ಮಾಪಕನ ಮನೆ ಮೇಲೆ ಪೊಲೀಸ್ ದಾಳಿ

ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಭಂದಿಸಿದಂತೆ ಕನ್ನಡ ನಿರ್ಮಾಪಕನ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ‘ಜಸ್ಟ್ ಮಾತ್ ಮಾತಲ್ಲಿ’ ಕೆಂಪೇಗೌಡ’ ‘ವರದನಾಯಕ’ ‘ಕೆಂಪೇಗೌಡ 2’ ಸಿನಿಮಾಗಳನ್ನ ನಿರ್ಮಾಣ ಮಾಡಿದ್ದ ನಿರ್ಮಾಪಕ ಶಂಕರೇಗೌಡ ಅವರ ಬೆಂಗಳೂರಿನ ಮನೆ ಹಾಗೂ ಕಚೇರಿಯ ಮೇಲೆ ಗೋವಿಂದ ಪುರ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.

ನಿರ್ಮಾಪಕ ಶಂಕರೇಗೌಡ ಅವರ ಕಚೇರಿ ಮೇಲೆ ಗೋವಿಂದಪುರ ಪೊಲೀಸರು ದಾಳಿ ನಡೆಸಿದ್ದು ಹುಡುಕಾಟ ನಡೆಸಿದ್ದಾರೆ. ಶಂಕರೇಗೌಡ ಅವರ ಸಂಜಯ್​ನಗರದ ಆರ್​ಎಂವಿ ಕ್ಲಬ್ ಎದುರಿಗಿರುವ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಸ್ಯಾಂಡಲ್​ವುಡ್ ಡ್ರಗ್ಸ್ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ ಎನ್ನುವ ಮಾಹಿತಿ ಇದೆ.

ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ಪೊಲೀಸರು ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ನಿರ್ಮಾಪಕ ಶಂಕರೇಗೌಡ ಕಚೇರಿಯಲ್ಲೇ ಇದ್ದು.. ಶಂಕರೇಗೌಡರಿಗೆ ಸೇರಿದ ಕಾರುಗಳು ಹಾಗೂ ಕಚೇರಿಯನ್ನ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಪೊಲೀಸ್ ಕಾರ್ಯಾಚರಣೆಯಲ್ಲಿ ಏನೆಲ್ಲಾ ಸಿಕ್ಕಿದೆ ಎಂಬ ಮಾಹಿತಿ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top