fbpx
ಸಮಾಚಾರ

ಸಿಡಿ ಸ್ಪೋಟದ ಹಿಂದೆ ಇದ್ದಾರೆ ಆ “ಮಹಾನಾಯಕ” : ಹೊಸ ಬಾಂಬ್ ಸಿಡಿಸಿದ ರಮೇಶ್ ಜಾರಕಿಹೊಳಿ

ರಮೇಶ್ ಜಾರಕಿಹೊಳಿ ವಿರುದ್ಧ ಬಿಡುಗಡೆಯಾದ ಸೆಕ್ಸ್ ಸಿಡಿ ಕೇಸ್ ಬಗ್ಗೆ ಸ್ಪಷ್ಟನೆ ನೀಡಲು ಇಂದು ಸದಾಶಿವನಗರದ ನಿವಾಸದಲ್ಲಿ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಯಾವುದೇ ತನಿಖೆಗೂ ನಾನು ಬದ್ಧವಾಗಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಸಿಡಿ ನೂರಕ್ಕೆ ನೂರರಷ್ಟು ನಕಲಿಯಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕುತ್ತ ಹೇಳಿದ್ದಾರೆ.

“ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಷಡ್ಯಂತ್ರದ ಹಿಂದೆ ನಾಲ್ಕು ಮಂದಿ ಇದ್ದಾರೆ. ಒಬ್ಬ ಮಹಾನಾಯಕ ನನಗೆ ಸವಾಲು ಹಾಕಿದ್ದ. ಒರಾಯನ್ ಮಾಲ್ ಹಾಗೂ ಹುಳಿಮಾವು ಸೇರಿ ಬೆಂಗಳೂರಿನ 4 ಕಡೆ ಷಡ್ಯಂತ್ರ ನಡೆಸಿದ್ದಾರೆ. ಎಷ್ಟೇ ಪ್ರಭಾವಿಯಾಗಲೀ ಜೈಲಿಗೆ ಕಳಿಸದೇ ಬಿಡಲ್ಲ. ನಾನು ರಾಜಕಾರಣಕ್ಕೆ ಬರ್ತೀನೋ ಇಲ್ಲವೋ ಗೊತ್ತಿಲ್ಲ. ಅವರನ್ನಂತೂ ಬಿಡಲ್ಲ. ” ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದರು.

 

ನಾನು ಬಹಳ ದುಖದಲ್ಲಿದ್ದೇನೆ. ಸಿಡಿ ಬಿಡುಗಡೆ ಆಗಿದ್ದ ದಿನವೇ ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯುತ್ತಿದ್ದೆ. ನಾನು ತಪ್ಪು ಮಾಡಿದ್ರೇ.. ಆ ತಾಯಿಯೇ ಶಿಕ್ಷೆ ವಿಧಿಸಲಿ. ಅಲ್ಲಿಂದ ಬಂದು ಒಂದು ದಿನ ತಡೆದು, ರಾತ್ರಿ 9.30ಕ್ಕೆ ಸಿಡಿ ಬಿಡುಗಡೆ ನಂತ್ರ ರಾಜೀನಾಮೆ ಸಲ್ಲಿಸಿದ್ದೇನೆ ಎಂದರು. ಇಂದು ಸುದ್ದಿಗೋಷ್ಠಿ ನಡೆಸಿದ ರಮೇಶ್ ಜಾರಕಿಹೊಳಿ, ಘಟನೆ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದೇವೆ. ಯಶವಂತಪುರ ಮತ್ತು ಹುಳಿಮಾವಿನಲ್ಲಿ ಸಿಡಿ ಬಗ್ಗೆ ಪ್ಲಾನ್ ಮಾಡಲಾಗಿದೆ. ನಾಲ್ಕು ಮತ್ತು ಐದನೇ ಫ್ಲೋರ್ ನಲ್ಲಿ ಮೀಟಿಂಗ್ ನಡೆದಿದೆ ಎಂದು ಮಾತ್ರ ಹೇಳಬಲ್ಲೆ. ಓರ್ವ ಮಹಾನಾಯಕ ಈ ಷಡ್ಯಂತ್ರ ಹಿಂದಿದ್ದಾನೆ ಎಂದು ಆರೋಪಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top