fbpx
ಸಮಾಚಾರ

ಭಾರತದ ಅತೀ ಹಿರಿಯ ಮಹಿಳೆಗೆ ಲಸಿಕೆ: ಬೆಂಗಳೂರಿನ 103 ವರ್ಷದ ವೃದ್ಧೆಗೆ ಡೋಸ್

103 ವರ್ಷ ವಯಸ್ಸಿನ ಮಹಿಳೆಯೊಬ್ಬರು ನಿನ್ನೆ ಕೊರೊನಾ ಲಸಿಕೆಯ ಮೊದಲ ಡೋಸ್​ ಪಡೆದುಕೊಂಡಿದ್ದಾರೆ. ಈ ಮೂಲಕ ಅವರು ಕೊರೊನಾ ಲಸಿಕೆ ಪಡೆದ ದೇಶದ ಅತೀ ಹಿರಿಯ ವ್ಯಕ್ತಿಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜೆ.ಕಾಮೇಶ್ವರಿ ಎಂಬ 103 ವರ್ಷದ ಮಹಿಳೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಲಸಿಕೆ ಪಡೆದುಕೊಂಡರು. ಈ ಮೂಲಕ ಕೋವಿಡ್ 19 ಲಸಿಕೆ ಪಡೆದ ಭಾರತದ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಕಾಮೇಶ್ವರಿ ಪಾತ್ರರಾದರು. ಇದಕ್ಕೂ ಮೊದಲು ಮುಂಬೈನ 100 ವರ್ಷದ ಶಶಿಕಲಾ ಜೋಶಿ ಕೋವಿಡ್ ಲಸಿಕೆ ಪಡೆದ ಅತೀ ಹಿರಿಯ ಮಹಿಳೆ ಎನಿಸಿಕೊಂಡಿದ್ದರು

ಅಪೊಲೋ ಆಸ್ಪತ್ರೆಯಲ್ಲಿ ಲಸಿಕೆ ಪಡೆದ ನಂತರ ಕಾಮೇಶ್ವರಿಯವರ ಆರೋಗ್ಯದಲ್ಲಿ ಯಾವುದೇ ಏರುಪೇರು ಉಂಟಾಗಿಲ್ಲ ಎಂದು ವರದಿಯಾಗಿದೆ. ಲಸಿಕೆ ಪಡೆಯುವಾಗ ಕಾಮೇಶ್ವರಿಯವರ 77 ವರ್ಷದ ಪುತ್ರ ಕೂಡ ಜೊತೆಗಿದ್ದರು.

ದೈರ್ಯವಾಗಿ ಕೊರೋನಾ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕಾಮೇಶ್ವರಿ ಅವರು ಲಸಿಕೆ ಪಡೆದುಕೊಳ್ಳಲು ಹಿಂಜರಿಯುವವರಿಗೆ ಮಾದರಿಯಾಗಿದ್ದಾರೆ. ಜೊತೆಗೆ ಕೊರೋನಾ ವಿರುದ್ದದ ಹೋರಾಟದಲ್ಲಿ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಭಾಗಿಯಾಗಬೇಕು ಎಂಬ ಸಂದೇಶವನ್ನು ಸಾರಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top