fbpx
ಸಮಾಚಾರ

ಪಾಕಿಸ್ತಾನಕ್ಕೆ ಸಹಾಯ ಹಸ್ತ ಚಾಚಿದ ಭಾರತ: ಪಾಕ್‌ಗೆ ಭಾರತದಿಂದ 45 ಮಿಲಿಯನ್ ಡೋಸ್ ಕೋವಿಡ್-19 ಲಸಿಕೆ

ನೆರೆಯ ಪಾಕಿಸ್ತಾನಕ್ಕೂ ಭಾರತ ಕೊರೋನಾ ಲಸಿಕೆ ರವಾನಿಸಲಿದೆ. ಆದರೆ ಇದು ಎರಡು ದೇಶಗಳ ನಡುವಿನ ನೇರ ಖರೀದಿ- ಪೂರೈಕೆ ಪ್ರಕ್ರಿಯೆ ಆಗಿರುವುದಿಲ್ಲ. ಬದಲಾಗಿ ಬಡ ದೇಶಗಳಿಗೆ ಆದ್ಯತೆಯ ಮೇಲೆ ಲಸಿಕೆ ಪೂರೈಸಲು ಜಾಗತಿಕ ಮಟ್ಟದಲ್ಲಿ ರಚಿಸಲಾಗಿರುವ ‘ಗವಿ’ (ಗ್ಲೋಬಲ್‌ ಅಲಯನ್ಸ್‌ ಫಾರ್‌ ವ್ಯಾಕ್ಸಿನೇಷನ್‌ ಆ್ಯಂಡ್‌ ಇಮ್ಯುನೈಜೇಷನ್‌) ಯೋಜನೆಯಡಿ ಲಸಿಕೆ ಪೂರೈಕೆಯಾಗಲಿದೆ.

ಲಸಿಕೆ ಮೈತ್ರಿಕೂಟವಾದ ‘ಗವಿ ಅಲೈಯನ್ಸ್’, ಮಾರಕ ಹಾಗೂ ಅಪಾಯಕಾರಿ ಸಾಂಕ್ರಾಮಿಕ ಕಾಯಿಲೆಗಳಿಂದ ಜಗತ್ತಿನ ಸುಮಾರು ಅರ್ಧದಷ್ಟು ಮಕ್ಕಳನ್ನು ರಕ್ಷಿಸಲು ಲಸಿಕೆ ನೀಡಲು ನೆರವು ನೀಡುತ್ತಿದೆ. ಭಾರತದ ಸೆರಮ್ ಇನ್‌ಸ್ಟಿಟ್ಯೂಟ್ ತಯಾರಿಸಿದ ಕೋವಿಶೀಲ್ಡ್ ಲಸಿಕೆಯ ಒಟ್ಟು 45 ಮಿಲಿಯನ್ ಡೋಸ್‌ಗಳು ಪಾಕಿಸ್ತಾನಕ್ಕೆ ತಲುಪಲಿವೆ. ಅದರಲ್ಲಿ 16 ಮಿಲಿಯನ್ ಡೋಸ್‌ಗಳು ಈ ಜೂನ್‌ವರೆಗೂ ಪೂರೈಕೆಯಾಗಲಿವೆ ಎಂದು ತಿಳಿಸಿದ್ದಾರೆ.

ಈ ತಿಂಗಳಿನಿಂದ ಭಾರತದಲ್ಲಿ ತಯಾರಿಸಿದ ಕರೋನಾ ಲಸಿಕೆಯ ಪ್ರಮಾಣವನ್ನು ಪಾಕಿಸ್ತಾನ ಪಡೆಯಲಿದೆ ಎಂದು ಪಾಕಿಸ್ತಾನದ ರಾಷ್ಟ್ರೀಯ ಆರೋಗ್ಯ ಸೇವಾ ಕಾರ್ಯದರ್ಶಿ ಅಮೀರ್ ಅಶ್ರಫ್ ಖವಾಜಾ ಹೇಳಿದ್ದಾರೆ. ಇದೀಗ ಪಾಕಿಸ್ತಾನದ ಮುಂಚೂಣಿ ಕಾರ್ಮಿಕರು ಮತ್ತು ಹಿರಿಯ ನಾಗರಿಕರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಖ್ವಾಜಾ ಹೇಳಿದರು.

ಕೊರೊನಾ ಲಸಿಕೆಗಾಗಿ ಪಾಕಿಸ್ತಾನ ಸರ್ಕಾರ ಸಂಪೂರ್ಣವಾಗಿ ಚೀನಾವನ್ನೇ ಅವಲಂಬಿಸಿತ್ತು. ಆದರೆ ಇದೀಗ ಪಾಕಿಸ್ತಾನದ ನಾಗರಿಕರು ಭಾರತದ ಲಸಿಕೆ ಮೇಲೆ ಹೆಚ್ಚು ವಿಶ್ವಾಸ ಹೊಂದಿರುವ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಹೀಗಾಗಿ ಉಭಯ ದೇಶಗಳು ಗಡಿಯಲ್ಲಿ ಕದನವಿರಾಮ ಉಲ್ಲಂಘನೆ ಮಾಡದಂತೆ ಮಾಡಿಕೊಂಡಿದ್ದ ಹಳೆಯ ಒಪ್ಪಂದವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ಧಾರಿಸಿದ್ದರಿಂದ ಈ ವಿಚಾರ ಬೆಳಕಿಗೆ ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top