fbpx
ಸಮಾಚಾರ

“ನಾನು ಅಪ್ಪ-ಅಮ್ಮನಿಗೆ ಹುಟ್ಟಿದ ಮಗ” ಜಮೀನಿನ ಗಲಾಟೆ ಕುರಿತು ಯಶ್ ಗರಂ

ಜಮೀನಿನ ವಿವಾದದ ಕಾರಣದಿಂದ ಯಶ್ ಪೋಷಕರು ಮತ್ತು ಗ್ರಾಮಸ್ಥರ ನಡುವೆ ನಡೆದಿದ್ದ ಗಲಾಟೆಯ ವಿಚಾರವಾಗಿ ರಾಕಿಂಗ್ ಸ್ಟಾರ್ ಯಶ್ ಹಾಸನದ ದುದ್ದ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ನಂತರ ತಮ್ಮ ಜಮೀನಿನ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಯಶ್.. “ನಾನು ಅಪ್ಪ-ಅಮ್ಮನಿಗೆ ಹುಟ್ಟಿದ ಮಗ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ತಂದೆ ತಾಯಿಗೆ ಸಮಸ್ಯೆ ಆದಾಗ ಇಮೇಜ್​ ಮುಖ ನೋಡಿ ಸುಮ್ಮನೆ ಕೂರೋಕಾಗಲ್ಲ. ನಾನೂ ಅಪ್ಪ ಅಮ್ಮನಿಗೆ ಹುಟ್ಟಿದ ಮಗ ನಮ್ಮ ತಂದೆ ತಾಯಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಎಲ್ಲಿಂದಲೋ‌ ಬಂದವರು ಅಂತಾರಂತೆ, ನಾನು ಇಲ್ಲೇ ಹುಟ್ಟಿ ಬೆಳೆದವನು ಸಾರ್, ನಾನು ಹಾಸನದಲ್ಲೂ ಮಾಡ್ತೀನಿ, ಬೆಳಗಾವಿಯಲ್ಲೂ ಮಾಡ್ತೀನಿ, ಮಂಗಳೂರಲ್ಲೂ ಮಾಡ್ತೀನಿ, ನಾವು ಸೆಲೆಬ್ರಿಟಿ ಆಗೋದೇ ತಪ್ಪು ಎನ್ನುವ ಹಾಗಾಗಿದೆ” ಎಂದು ಗರಂ ಆಗಿದ್ದಾರೆ.

“ಜಮೀನಿನ ಒಳಗೆ ಬಂದು, ಅಕ್ಕ-ಪಕ್ಕ ಗಾಡಿ ನಿಲ್ಲಿಸಿಕೊಂಡು, ಮಾಡಬಾರದ ಕೆಲಸ ಮಾಡಿಕೊಂಡು, ಕುಡಿದು, ಕಾರ್ಡ್ಸ್ ಆಡುವುದನ್ನೆಲ್ಲ ನೋಡಿಕೊಂಡು ಸುಮ್ಮನೆ ಇರುವುದಕ್ಕೆ ಆಗಲ್ಲ. ಕೆಲಸ ಮಾಡುತ್ತಿರುವ ಹುಡುಗರ ಮೇಲೆ ಗಲಾಟೆ ಮಾಡಿದ್ದಾರೆ. ರಸ್ತೆ ಮಾಡುತ್ತಿರುವ ಜಾಗದಲ್ಲಿ ಮಾತುಕತೆ ಆಗಿದೆ. ಅದನ್ನು ಮಾತಲ್ಲೇ ಬಗೆಹರಿಸಿಕೊಳ್ಳಬೇಕು. ಹುಡುಗರ ಮೇಲೆ ಕೈ ಮಾಡಿದರೆ…? ನಮ್ಮ ಜೊತೆಗೆ ಕೆಲಸ ಮಾಡುವ ಹುಡುಗರು ನಮ್ಮ ಮನೆಯ ಹುಡುಗರಿದ್ದ ಹಾಗೆ..’ ಎಂದು ನಟ ಯಶ್ ಹೇಳಿದ್ದಾರೆ.

ನಾನೇನು ಬೇರೆ ಕಡೆಯಿಂದ ಬಂದವನಲ್ಲ ಹಾಸನದಲ್ಲೇ ಹುಟ್ಟಿ ಬೆಳೆದವನು. ಕೃಷಿ ಮಾಡುವ ಉದ್ದೇಶದಿಂದ ಜಮೀನು ಖರೀದಿಸಿದ್ದೇನೆ. ನಮ್ಮ ಜಮೀನಿಗೆ ಬಂದು ಕೆಲವರು ಇಸ್ಪೀಟ್​ ಆಡ್ತಿದ್ರು, ನಮ್ಮ ಜಮೀನು ಇಸ್ಪೀಟು ಅಡ್ಡೆಯಂತಾಗಿತ್ತು, ಕುಡುಕರ ಹಾವಳಿಯೂ ಇತ್ತು. ಹೀಗಾಗಿ ಜಮೀನಿಗೆ ಕಾಂಪೌಂಡ್ ಹಾಕುತ್ತಿದ್ದೇವೆ. ಈ ಸಂದರ್ಭದಲ್ಲಿ ಗಲಾಟೆ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top