fbpx
ಸಮಾಚಾರ

“ಸಿಡಿ ಹಿಂದೆ ಬಿಜೆಪಿ, ಕಾಂಗ್ರೆಸ್‌ ನಾಯಕರ ಕೈವಾಡ ಇದೆ” ಇಬ್ಬರ ಬಗ್ಗೆ ಯತ್ನಾಳ್ ಹೊಸ‌ ಬಾಂಬ್

ರಾಜ್ಯದಲ್ಲಿ ಸಿ.ಡಿ ಗದ್ದಲ ಮುಕ್ತಾಯಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಇನ್ನೂ 23 ಸಿ.ಡಿಗಳು ಇವೆ ಎಂದು ಹೊಸ ಬಾಂಬೊಂದನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಕಿದ್ದಾರೆ. ಸಿಡಿ ಹಿಂದೆ ಎರಡು ಪಕ್ಷದ ಇಬ್ಬರು ನಾಯಕರಿದ್ದಾರೆ‌. ಒಬ್ಬರು ಕಾಂಗ್ರೆಸ್ಸಿನವರು, ಇನ್ನೊಬ್ಬರು ಬಿಜೆಪಿಯವರು. ಇಬ್ಬರು ಸಮ್ಮಿಶ್ರವಾಗಿ ಮಾಡುತ್ತಿದ್ದಾರೆ. ಈ ಸರ್ಕಾರವೂ ಕಾಂಗ್ರೆಸ್, ಬಿಜೆಪಿ ಸಮ್ಮಿಶ್ರ ಸರ್ಕಾರ ಎಂದು ಶಾಸಕ ಬಸನ ಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿಡಿ ಪ್ರಕರಣದಲ್ಲಿ ಸಂತ್ರಸ್ತರು ಯಾರೂ ಇಲ್ಲ. ಸಂತ್ರಸ್ತೆ ಅಂತ ಇದ್ದರೆ ಅದು ದೆಹಲಿಯ ನಿರ್ಭಯ ಪ್ರಕರಣದ ಯುವತಿ ಮಾತ್ರ‌. ಇವರು ಹಲ್ಲು ಕಿಸಿದು ಮಾತನಾಡುತ್ತಾರೆ. ಸಿಡಿಯಲ್ಲಿ ಇರುವ ಇಬ್ಬರು ಸುಕ ಪುರುಷರೇ ಎಂದಿದ್ದಾರೆ.

ನಾನು ಬೇರೆ ಸಿ.ಡಿ ಇದೆ ಅಂತ ಹೇಳಿದ್ದೆ, ಆದರೆ ಬಿಡುಗಡೆಯಾಗಿದ್ದು ಬೇರೆಯದ್ದೇ ಸಿ.ಡಿ, ಇನ್ನೂ ಉಳಿದವು ಶೀಘ್ರದಲ್ಲಿ ಹೊರ ಬರುತ್ತವೆ ಎಂದರು. ರಮೇಶ್ ಜಾರಕಿಹೊಳಿಯವರ ಸಿ.ಡಿಯನ್ನು ಇವರು ಬಿಟ್ಟಿದ್ದಾರೆ, ರಮೇಶ್ ಜಾರಕಿಹೊಳಿ ಸುಮ್ಮನೆ ಇರುತ್ತಾರಾ? ಅವರ ಬಳಿಯೂ ಕೆಲವು ಇರುತ್ತವೆ, ಅದರಲ್ಲೂ ಅಪ್ಪ ಮಕ್ಕಳ ಸಿ.ಡಿ ಅವರ ಬಳಿ ಇವೆ, ಅವರೂ ಆ ಸಿಡಿಗಳನ್ನ ಶೀಘ್ರದಲ್ಲೇ ಬಿಡುತ್ತಾರೆ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top