fbpx
ಸಮಾಚಾರ

IPLಗಾಗಿ ಶಸ್ತ್ರಾಭ್ಯಾಸ ಆರಂಭಿಸಿದ RCBಯ ಆಪತ್ಭಾಂದವ: ಪ್ರಾಕ್ಟೀಸ್ ನಲ್ಲಿ ಐಫೋನ್ ಒಡೆದುಹಾಕಿದ ಎಬಿಡಿ :ವಿಡಿಯೋ ವೈರಲ್

ಬ್ಯಾಟ್ ಹಿಡಿದು ಮೈದಾನಕ್ಕಿಳಿದರೆ ಹೀನಾಮಾನ ಬ್ಯಾಟಿಂಗ್ ನಡೆಸಿ ಎದುರಾಳಿಗಳ ಸೊಲ್ಲು ಅಡಗಿಸುವ ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟ್ಸ್ ಮ್ಯಾನ್ ಎಬಿ ಡಿ ವಿಲಿಯರ್ಸ್ ಕೇವಲ ದಕ್ಷಿಣ ಆಫ್ರಿಕಾ ಮಾತ್ರವಲ್ಲದೆ ಪ್ರಪಂಚದ ಎಲ್ಲಾ ದೇಶಗಳಲ್ಲಿಯೂ ಅಭಿಮಾನಿಗಳನ್ನು ಹೊಂದಿದ್ದಾರೆ.. ಭಾರತದಲ್ಲಂತೂ ಅವರ ಅಭಿಮಾನಿಗಳು ಜಾಸ್ತಿಯೇ ಇದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ಮಿ. 360 ರಾಜ್ಯವನ್ನ ಅತಿ ಹೆಚ್ಚು ಪ್ರೀತಿಸುವುದು ಎಲ್ಲರಿಗೂ ಗೊತ್ತಿರುವ ವಿಷಯ.

 

 

ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ನಂತರ ಕೇವಲ ಐಪಿಎಲ್ನಲ್ಲಿ ಮಾತ್ರ ಅವರ ಆಟವನ್ನು ಕಣ್ಣು ತುಂಬಿಕೊಳ್ಳುವ ಅಭಿಮಾನಿಗಳು ಐಪಿಎಲ್ ಗಾಗಿ ಕಾದು ಕುಳಿತಿದ್ದಾರೆ.. ಎಬಿ ಡಿವಿಲಿಯರ್ಸ್ ಮುಂದಿನ ಐಪಿಎಲ್ ಆವೃತ್ತಿಗೆ ತಮ್ಮ ಸಿದ್ಧತೆಯನ್ನು ಆರಂಭಿಸಿದ್ದಾರೆ. ಐಪಿಎಲ್ 14ನೇ ಆವೃತ್ತಿಯಲ್ಲಿ ಪಾಳ್ಗೊಳ್ಳುವ ಮುನ್ನ ಎಬಿಡಿ ವಿಲಿಯರ್ಸ್ ದಕ್ಷಿಣ ಆಫ್ರಿಕಾದಲ್ಲಿ ನೆಟ್ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.

 

 

ಮಂಗಳವಾರದಿಂದ ಸಂಪೂರ್ಣವಾಗಿ ಅಭ್ಯಾಸದಲ್ಲಿ ಎಬಿ ಡಿವಿಲಿಯರ್ಸ್ ತೊಡಗಿಸಿಕೊಂಡಿದ್ದಾರೆ. ಬುಧವಾರದ ನೆಟ್ ಅಭ್ಯಾಸದಲ್ಲಿ ಎಬಿಡಿ ತಮ್ಮ ಐಫೋನ್‌ನಲ್ಲಿ ಚಿತ್ರೀಕರಿಸುತ್ತಿದ್ದರು. ಈ ಸಂದರ್ಭದಲ್ಲಿ ಸ್ಟ್ರೈಟ್‌ಹಿಟ್ ಹೊಡೆತವೊಂದು ಎಬಿ ಡಿವಿಲಿಯರ್ಸ್ ಮೊಬೈಲ್‌ಗೆ ಬಡಿದು ಬೀಳಿಸಿದೆ. ಇದರ ವಿಡಿಯೋವನ್ನು ಎಬಿ ಡಿವಿಲಿಯರ್ಸ್ ಹಂಚಿಕೊಂಡಿದ್ದಾರೆ. ಇದಕ್ಕೆ “ಐಫೋನ್ ಔಟ್” ಎಂದು ಅಡಿ ಬರಹವನ್ನು ನೀಡಿದ್ದಾರೆ.

ಒಟ್ನಲ್ಲಿ ಎಬಿ ಡಿವಿಲಿಯರ್ಸ್ ಈ ಬಾರಿ ಆರ್ಸಿಬಿಗೆ ಐಪಿಎಲ್ ಕಪ್ ಗೆಲ್ಲಿಸಿಕೊಡೋಕೆ ಪಣತೊಟ್ಟಿದ್ದಾರೆ. ಅದ್ರಲ್ಲೂ ಭಾರತದಲ್ಲೇ ಐಪಿಎಲ್ ನಡೆಯುತ್ತಿರೋದ್ರಿಂದ, ಎಬಿಡಿ ಬ್ಯಾಟ್ನಿಂದ ಬೌಂಡರಿ ಸಿಕ್ಸರ್ಗಳ ಸುರಿಮಳೆ ಸುರಿಯೋದ್ರಲ್ಲಿ ಅನುಮಾನವೇ ಇಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top