fbpx
ಸಮಾಚಾರ

ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ದಾಳಿ – ಆಸ್ಪತ್ರೆಗೆ ದಾಖಲು

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿವರ ಮೇಲೆ ಹಲ್ಲೆ ನಡೆದಿದ್ದು, ಅವರ ಬಲಗಾಲಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿ ಹಿಂದಿರುಗುವಾಗ ಈ ಘಟನೆ ನಡೆದಿದ್ದು ಸದ್ಯ ಮಮತಾ ಬ್ಯಾನರ್ಜಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

 

‘ನನಗೆ ಪರಿಚಿತರಲ್ಲದ ನಾಲ್ಕೈದು ಜನರು ನನ್ನನ್ನು ಕೆಳಗೆ ತಳ್ಳಿದರು. ತಲೆ, ಕೈ ಮತ್ತು ಕಾಲಿಗೆ ತುಂಬಾ ನೋವಾಗಿದೆ. ಇಂದು (ಬುಧವಾರ) ರಾತ್ರಿ ನಂದಿಗ್ರಾಮದಲ್ಲಿಯೇ ತಂಗಬೇಕು ಎಂದು ಯೋಜಿಸಿದ್ದೆ. ಆದರೆ, ಈಗ ಚಿಕಿತ್ಸೆಗಾಗಿ ಕೋಲ್ಕತ್ತಕ್ಕೆ ಹೋಗಲೇಬೇಕಾಗಿದೆ. ಖಂಡಿತವಾಗಿಯೂ ಇದೊಂದು ಷಡ್ಯಂತ್ರ. ಸ್ಥಳದಲ್ಲಿ ಸ್ಥಳೀಯ ಪೊಲೀಸರು ಅಥವಾ ಎಸ್‌ಪಿ ಇರಲಿಲ್ಲ’ ಎಂದು ಮಮತಾ ಹೇಳಿದರು.

 

 

ಘಟನೆ ಬಳಿಕ ಅವರನ್ನು ಕೊಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಅವರ ಆರೋಗ್ಯದ ಸಂಬಂಧ ವೈದ್ಯರು ಮಾಹಿತಿ ನೀಡಿದ್ದು ಅವರ ಎಡ ಕಾಲಿಗೆ ಹಾಗೂ ಬಲ ಭಾಗದ ಭುಜಕ್ಕೆ ಗಂಭೀರ ಗಾಯಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಆಸ್ಪತ್ರೆಯ ಬೆಡ್‌ ಮೇಲೆ ಸಿಎಂ ಮಮತಾ ಬ್ಯಾನರ್ಜಿ ಮಲಗಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಟಿಎಂಸಿ ನಾಯಕರು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top