fbpx
ಸಮಾಚಾರ

ಐಪಿಎಲ್ ಆರಂಭಕ್ಕೂ ಮುನ್ನವೇ RCB ತಂಡಕ್ಕೆ ಭಾರಿ ಆಘಾತ: ಸ್ಟಾರ್ ಆಟಗಾರ ಟೂರ್ನಿಯಿಂದಲೇ ಔಟ್

2021ರ ಐಪಿಲ್‌ ಆರಂಭವಾಗುವುದಕ್ಕೂ ಮೊದಲೇ ರಾಯಲ್‌ ಚಾಲೆಂಜರ್ಸ್ ಬೆಂಗಳೂರಿಗೆ ಭಾರಿ ಹಿನ್ನಡೆ ಉಂಟಾಗಿದೆ. ಹದಿನಾಲ್ಕನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಆರಂಭಿಕ ಬ್ಯಾಟ್ಸ್‌ಮನ್‌ ಜಾಶ್‌ ಫಿಲಿಪ್‌ ಅಲಭ್ಯರಾಗಿದ್ದಾರೆ. ಅದ್ಭುತ ಫಾರ್ಮ್‌ನಲ್ಲಿದ್ದ ಆಸ್ಟ್ರೇಲಿಯಾ ತಂಡದ ಯುವ ಬ್ಯಾಟ್ಸ್‌ಮನ್‌ ಜಾಶ್‌ ಫಿಲಿಪ್ ವೈಯಕ್ತಿಕ ಕಾರಣಗಳಿಂದ‌ 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಗೆ ಅಲಭ್ಯರಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ.

 

 

ಈ ಕುರಿತು ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್‌ನಲ್ಲಿ ತಿಳಿಸಿದೆ. “ವೈಯಕ್ತಿಕ ಕಾರಣಗಳಿಂದ ಜಾಶ್‌ ಫಿಲಿಪ್‌ 2021ರ ಐಪಿಎಲ್‌ಗೆ ಅಲಭ್ಯರಾಗಿದ್ದಾರೆ ಎಂಬ ವಿಷಯವನ್ನು ತಿಳಿಸಲು ವಿಷಾದಿಸುತ್ತೇವೆ. ಅವರ ಸ್ಥಾನಕ್ಕೆ ಅಗ್ರ ಕ್ರಮಾಂಕದಲ್ಲಿ ಫಿನ್‌ ಅಲ್ಲೆನ್‌ಗೆ ಸ್ಥಾನ ಕಲ್ಪಿಸಲಾಗಿದೆ,” ಎಂದು ಆರ್‌ಸಿಬಿ ಟ್ವೀಟ್‌ ಮಾಡಿದೆ.

 

 

ಸದ್ಯ ಅದ್ಭುತ ಲಯದಲ್ಲಿದ್ದ ಜಾಶ್‌ ಫಿಲಿಪ್‌ ಸೇವೆಯನ್ನು ಆರ್‌ಸಿಬಿ ಕಳೆದುಕೊಳ್ಳುತ್ತಿರುವ ಬೆಂಗಳೂರು ಫ್ರಾಂಚೈಸಿಗೆ ಭಾರಿ ಹಿನ್ನಡೆಯಾಗಿದೆ. ಇನ್ನು ಜೋಶ್ ಫಿಲಿಪ್ ಅವರ ನಿರ್ಗಮನದಿಂದ ತೆರವಾಗಿರುವ ಸ್ಥಾನಕ್ಕೆ RCB ಮ್ಯಾನೇಜ್ಮೆಂಟ್ ಫಿನ್ ಅಲೆನ್ ಅವರನ್ನು ಸೇರಿಸಿಕೊಂಡಿದೆ. ಹಾರ್ಡ್ ಹಿಟ್ಟರ್ ಎಂದೇ ಹೆಸರುವಾಗಿರುವ ನ್ಯೂಜಿಲೆಂಡ್‌ನ ಯುವ ವಿಕೆಟ್‌ಕೀಪರ್ ‘ಫಿನ್ ಅಲೆನ್’ RCBಯಲ್ಲಿ ಆಡುವ ಮೂಲಕ ಇದೆ ಮೊದಲ ಬಾರಿಗೆ ಐಪಿಎಲ್ಗೆ ಪಾದಾರ್ಪಣೆ ಮಾಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top