fbpx
ಸಮಾಚಾರ

ಕ್ರೀಡಾ ನಿರೂಪಕಿ ಸಂಜನಾ ಜೊತೆ ಬುಮ್ರಾ ಮದುವೆ? ಎಲ್ಲಿ ನಡೆಯಲಿದೆ ವಿವಾಹ..? ಇಲ್ಲಿದೆ ನೋಡಿ ಮಾಹಿತಿ

ಟೀಂ ಇಂಡಿಯಾ ವೇಗಿ ಜಸ್ಪ್ರಿತ್​ ಬುಮ್ರಾ ಮದುವೆ ಬಗ್ಗೆ ಹಲವು ಊಹಾಪೋಹಗಳು ಎದ್ದಿದ್ದವು.. ಅದರಲ್ಲೂ ಬುಮ್ರಾ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಪಂದ್ಯಾವಳಿಯ ನಾಲ್ಕನೇ (ಅಂತಿಮ) ಪಂದ್ಯವನ್ನೂ ಆಡದೆ, ವೈಯಕ್ತಿಕ ಕಾರಣಕ್ಕೆ ರಜೆ ಪಡೆಯುತ್ತಿದ್ದೇನೆ ಎಂದು ಹೇಳಿ ವಾಪಸ್​ ಬಂದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬ ಚರ್ಚೆಯಾಗಿತ್ತು.

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಮದುವೆ ಕುರಿತ ಗೊಂದಲಗಳಿಗೆ ತೆರೆ ಬಿದ್ದಿದೆ. ಜಸ್ಪ್ರೀತ್ ಬುಮ್ರಾ ಸ್ಟಾರ್ ಸ್ಪೋರ್ಟ್ಸ್ ನಿರೂಪಕಿ ಸಂಜನಾ ಗಣೇಶನ್ ಕೈ ಹಿಡಿಯಲಿದ್ದಾರೆ. ಗೊಂದಲಗಳು ತೆರೆ ಬಿದ್ದ ಬೆನ್ನಲ್ಲೇ ಇದೀಗ ಬುಮ್ರಾ ಹಾಗೂ ಸಂಜನಾ ಮದುವೆ ದಿನಾಂಕವೂ ಬಹಿರಂಗವಾಗಿದೆ. ಮಾರ್ಚ್ 14-15ರಂದು ಬುಮ್ರಾ ಹಾಗೂ ಸಂಜನಾ ಗಣೇಶನ್ ಮದುವೆ ನಡೆಯಲಿದೆ.

ಗೋವಾದಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಸಂಜನಾ ಗಣೇಶನ್ ಮದುವೆ ನಡೆಯಲಿದೆ ಎಂದು ವರದಿಯಾಗಿದೆ. ಸರಳ ಮದುವೆ ಕಾರ್ಯಕ್ರಮ ಇದಾಗಿದೆ ಅನ್ನೋ ಮಾಹಿತಿಯೂ ಬಹಿರಂಗವಾಗಿದೆ. ಬುಮ್ರಾ ಹಾಗೂ ಸಂಜನಾ ಕುಟುಂಬಸ್ಥರು ಹಾಗೂ ಆಪ್ತರನ್ನು ಮಾತ್ರ ಮದುವೆಗೆ ಆಹ್ವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.

ಭಾರತ ತಂಡದ ವೇಗಿ ಇದುವರೆಗೂ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಸಾರ್ವಜನಿಕವಾಗಿ ಎಲ್ಲಿಯೂ ಮಾತನಾಡಿರಲಿಲ್ಲ. ಅಲ್ಲದೆ, ಬುಮ್ರಾ ಯಾರೊಂದಿಗೆ ರಿಲೇಷನ್‌ಷಿಪ್‌ನಲ್ಲಿದ್ದರೂ ಎಂಬ ಬಗ್ಗೆಯೂ ಯಾರಿಗೂ ಗೊತ್ತಿರಲಿಲ್ಲ. ಈ ವಾರಾಂತ್ಯದಲ್ಲಿ ಜಸ್‌ಪ್ರಿತ್‌ ಬುಮ್ರಾ, ಕ್ರೀಡಾ ನಿರೂಪಕಿ ಸಂಜನಾ ಗಣೇಸನ್‌ ಅವರೊಂದಿಗೆ ವಿವಾಹವಾಗುತ್ತಿದ್ದಾರೆಂಬುದು ಇದೀಗ ಸ್ಪಷ್ಟವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top