fbpx
ಸಮಾಚಾರ

ವಿವಾದಾತ್ಮಕ ತೀರ್ಪಿಗೆ ಬಲಿಯಾದ ಲಂಕಾ ಆಟಗಾರ; ವಿಡಿಯೋ ವೈರಲ್

ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ಔಟ್ ಕ್ರಿಕೆಟ್​ ಪಂದ್ಯಗಳಲ್ಲಿ ಒಬ್ಬ ಬ್ಯಾಟ್ಸ್​​ಮನ್​ ಔಟಾಗಬಹುದಾದ 10 ವಿಧಗಳಲ್ಲಿ ಒಂದು. ಆದರೆ ಬ್ಯಾಟ್ಸ್​ಮನ್ ಹಾಗೆ ಔಟಾಗುವುದು ಬಹಳ ಅಪರೂಪ. ಕ್ರಿಕೆಟ್​ ಇತಿಹಾಸದಲ್ಲಿ ಕೇವಲ 8 ಬ್ಯಾಟ್ಸ್​ಮನ್​ಗಳು ಮಾತ್ರ ಹಾಗೆ ಔಟಾಗಿದ್ದಾರೆ. 8ನೇ ಘಟನೆ ಬುಧವಾರದಂದು ವೆಸ್ಟ್​ ಇಂಡೀಸ್​ನ ಆ್ಯಂಟಿಗುವಾದಲ್ಲಿರುವ ಸರ್​ ವಿವಿಯನ್ ರಿಚರ್ಡ್ಸ್ ಕ್ರಿಕೆಟ್​ ಮೈದಾನದಲ್ಲಿ ಸಂಭವಿಸಿದೆ.

 

 

ಲಂಕಾ ಇನ್ನಿಂಗ್ಸ್‌ನ 21ನೇ ಓವರ್‌ ವೇಳೆ ಗುಣತಿಲಕ ರನ್‌ಗಾಗಿ ಕೆಲ ದೂರ ಓಡಿದ್ದಾಗ ವಿಂಡೀಸ್‌ ನಾಯಕ ಕಿರೋನ್‌ ಪೊಲ್ಲಾರ್ಡ್‌ ಚೆಂಡನ್ನು ಕೈಗೆತ್ತಿಕೊಳ್ಳಲು ಧಾವಿಸಿದರು. ಈ ಸಂದರ್ಭದಲ್ಲಿ ಗುಣತಿಲಕ ಕ್ರೀಸ್‌ಗೆ ವಾಪಸಾಗುವ ವೇಳೆ ಚೆಂಡಿನ ಮೇಲೆ ಕಾಲಿಟ್ಟರು.

ಈ ವೇಳೆ ಅವರ ಕಾಲಿನ ಹಿಂಬದಿಗೆ ತಗುಲಿ ಚೆಂಡು ಕೀಪರ್‌ನತ್ತ ಸಾಗಿತು. ರನೌಟ್‌ ಮಾಡಲು ಬಂದ ಪೊಲ್ಲಾರ್ಡ್‌, ಕ್ಷೇತ್ರರಕ್ಷಣೆಗೆ ಅಡ್ಡಿಪಡಿಸಿದ್ದಾಗಿ ಅಂಪೈರ್‌ ಬಳಿ ದೂರಿ ಔಟ್‌ ನೀಡುವಂತೆ ಮನವಿ ಸಲ್ಲಿಸಿದರು. ಆನ್‌ಫೀಲ್ಡ್‌ ಅಂಪೈರ್‌ ಜೋ ವಿಲ್ಸನ್‌ 3ನೇ ಅಂಪೈರ್‌ಗೆ ತೀರ್ಪು ವರ್ಗಾಯಿಸುವ ಮೊದಲು ಸಾಫ್ಟ್‌ ಸಿಗ್ನಲ್‌ ಔಟ್‌ ಎಂದು ಘೋಷಿಸಿದ್ದರು. ಗುಣತಿಲಕ ಉದ್ದೇಶಪೂರ್ವಕವಾಗಿ ಕ್ಷೇತ್ರ ರಕ್ಷಣೆಗೆ ಅಡ್ಡಿಪಡಿಸಿದ್ದಾರೆ ಎನ್ನುವುದು ಖಚಿತವಾಗದಿದ್ದರೂ ಆನ್‌ಫೀಲ್ಡ್‌ ಅಂಪೈರ್‌ ಸಾಫ್ಟ್‌ ಸಿಗ್ನಲ್‌ ಔಟ್‌ ಎಂದು ಘೋಷಿಸಿದ್ದ ಕಾರಣ 3ನೇ ಅಂಪೈರ್‌ ಔಟ್‌ ಎನ್ನುವ ತೀರ್ಮಾನಕ್ಕೆ ಬಂದರು.

 

 

 

ಉದ್ದೇಶಪೂರ್ವಕವಾಗಿ ಯಾವುದೇ ತಪ್ಪು ಎಸಗದಿದ್ದರೂ ಫೀಲ್ಡಿಂಗ್‌ಗೆ‌ ಅಡ್ಡಿಯಾಗಿದ್ದಾರೆ ಎಂಬ ಐಸಿಸಿ ನಿಯಮದನ್ವಯ ಅಂಪೈರ್ ಔಟ್ ತೀರ್ಪು ನೀಡಿದರು. ಇದರಿಂದಾಗಿ ನಿರಾಸೆಯಾಗಿ ಪೆವಿಲಿಯನ್‌ಗೆ ಹಿಂತಿರುಗಬೇಕಾಯಿತು. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಯಿತು. ಫೀಲ್ಡಿಂಗ್‌ಗೆ ಅಡ್ಡಿಪಡಿಸುವ ಯಾವುದೇ ಪ್ರಯತ್ನವನ್ನು ಗುಣತಿಲಕ ಮಾಡಿರಲಿಲ್ಲ. ಬಳಿಕ ಇದನ್ನು ಮನಗಂಡಿರುವ ಕೀರಾನ್ ಪೊಲಾರ್ಡ್, ಪಂದ್ಯ ಮುಗಿದ ಬಳಿಕ ಲಂಕಾ ಆಟಗಾರನ ಬಳಿ ತೆರಳಿ ಕ್ಷಮೆಯಾಚನೆ ನಡೆಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top