fbpx
ಸಮಾಚಾರ

ಪಶ್ಚಿಮ ಬಂಗಾಳ ಸಿಎಂ ಆಸ್ತಿ ಘೋಷಣೆ: ಮಮತಾ ಬ್ಯಾನರ್ಜಿ ಬಳಿ ಇರೋ ಅಸ್ತಿ ಇಷ್ಟೇನಾ?

ಆಲ್ ಇಂಡಿಯಾ ತೃಣಮೂಲ ಪಕ್ಷದ ಅಧ್ಯಕ್ಷೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಸ್ತಿ ವಿವರಗಳನ್ನು ಘೋಷಿಸಲಾಗಿದೆ. ನಂದಿ ಗ್ರಾಮದಲ್ಲಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ತಮ್ಮ ಆಸ್ತಿ ಘೋಷಣೆ ಮಾಡಿದ್ದು ಮಮತಾ ಬ್ಯಾನರ್ಜಿ ಅವರ ಬಳಿ ಕೇವಲ 16.72 ಲಕ್ಷ ರೂ ಮೌಲ್ಯದ ಆಸ್ತಿ ಇದೆಯಂತೆ.

66 ವರ್ಷದ ಸಿಎಂ ಮಮತಾ ಬ್ಯಾನರ್ಜಿ ಅವರ ಒಟ್ಟು ಸ್ಥಿರಾಸ್ತಿ 16.72 ಲಕ್ಷ ಅಂತ ಘೋಷಣೆ ಮಾಡಿದ್ದಾರೆ. ಜೊತೆಗೆ 2019 ಹಾಗೂ 2020ರಲ್ಲಿ ತಮಗೆ 10 ಲಕ್ಷದ 34 ಸಾವಿರದ 370 ಆದಾಯ ಬಂದಿದೆ ಅಂತ ತಿಳಿಸಿದ್ದಾರೆ. ಮಮತಾ ಅವರ ಬಳಿ 69 ಸಾವಿರದ 255 ರೂ ನಗದು ಇದ್ದು, ಬ್ಯಾಂಕ್​ ಖಾತೆಯಲ್ಲಿ 13.53 ಲಕ್ಷ ಜಮಾವಣೆ ಇದೆ. ಇದಲ್ಲದೇ ಎನ್​ಎಸ್​ಸಿ ಯಲ್ಲಿ 18 ಸಾವಿರದ 490 ರೂಪಾಯಿಗಳ ಡೆಪಾಸಿಟ್​ ಇದೆ ಅಂತ ತಿಳಿಸಿದ್ದಾರೆ. ನಂದಿಗ್ರಾಮದಿಂದ ನಾಮಪತ್ರ ಸಲ್ಲಿಕೆ ಮಾಡುವಾಗ ಸಲ್ಲಿಸಿರೋ ಅಫಿಡವಿಟ್​ನಲ್ಲಿ ಈ ಬಗ್ಗೆ ದೀದಿ ಘೋಷಿಸಿದ್ದಾರೆ.

2019-20ರ ಹಣಕಾಸು ವರ್ಷದಲ್ಲಿ ಪಾವತಿಸಿದ ಆದಾಯ ತೆರಿಗೆ ಮೇಲೆ ಟಿಡಿಎಸ್ ರೂಪದಲ್ಲಿ 1.85 ಲಕ್ಷ ರೂ. ವಾಪಸ್ಸು ಬರಬೇಕಿದೆ. ಅಲ್ಲದೆ, ತಮ್ಮ ಬಳಿ 43, 837ರೂ ಮೌಲ್ಯದ ಮೌಲ್ಯದ 9 ಗ್ರಾಂ ಚಿನ್ನವಿದೆ ಎಂದು ಹೇಳಿದ್ದಾರೆ. ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಎಂ.ಎ ಸ್ನಾತ್ತಕೋತ್ತರ ಪದವಿ ಹಾಗೂ ಎಲ್‌ಎಲ್‌ಬಿ ಪದವಿ ಹೊಂದಿರುವ ಮಮತಾ, ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿಲ್ಲ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top