fbpx
ಸಮಾಚಾರ

ವಿಚಿತ್ರವಾಗಿ ಶಿವರಾತ್ರಿಯ ಶುಭಾಶಯ ಕೋರಿದ ನಿರ್ದೇಶಕ ವರ್ಮಾ: ಹಿಂದೂಗಳ ಕೆಂಗಣ್ಣಿಗೆ ಗುರಿಯಾದ RGV

ವಿಕ್ಷಿಪ್ತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಸಿನಿಮಾಗಳ ಮೂಲಕ ಸದ್ದು ಮಾಡುವ ಬದಲು ವಿವಾದಗಳ ಮೂಲಕವೇ ಹೆಚ್ಚು ಸುದ್ದಿ ಆದವರು.. ಸುದ್ದಿಯಾಗಲು ಏನೂ ವಿಷಯವಿಲ್ಲದಿದ್ದರೇ, ಅವರಿರಿವರ ಮೇಲೆ ಸುಖಾ ಸುಮ್ಮನೆ ಹರಿ ಹಾಯುತ್ತಾ, ಕೆಣಕುವ ಮೂಲಕ ನಾನಾ ರೀತಿಯ ವಿವಾದಗಳನ್ನು ಎಬ್ಬಿಸಿ ಒಳಗೊಳಗೇ ವಿಕೃತಾನಂದವನ್ನು ಪಡೆಯುತ್ತಾ ಬಂದಿದ್ದ ವರ್ಮಾ ಇತ್ತೀಚಿಗೆ ಯಾವುದೇ ವಿವಾದದ ಗೋಜಿಗೆ ಹೋಗದೆ ಸುಮ್ಮನಾಗಿದ್ದಾರೆ ಎನ್ನುವಷ್ಟರಲ್ಲೇ ಮತ್ತೊಂದು ವಿವಾದ ಮಾಡಿಕೊಂಡಿದ್ದಾರೆ.

 

 

ದೇಶದಲ್ಲಿ ಹಿಂದೂಗಳು ಸಂಭ್ರಮದಿಂದ ಶಿವರಾತ್ರಿ ಆಚರಿಸುತ್ತಿದ್ದಾರೆ. ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಆದರೆ, ರಾಮ್ ಗೋಪಾಲ್ ವರ್ಮಾ ತಾವೇ ಶಿವನ ಅವತಾರ ಎತ್ತಿರುವಂತೆ ಫೋಟೊ ಹಾಕಿ ವಿಚಿತ್ರವಾಗಿ ಶಿವರಾತ್ರಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಶಿವ ಗೋಪಾಲ್ ವರ್ಮಾ ಎಂಬ ಈ ವ್ಯಕ್ತಿ ಯಾರಿಗಾದರೂ ಕಾಣಿಸಿದರೆ, ದಯವಿಟ್ಟು ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಗೆ ತಿಳಿಸಿ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ

 

 

ರಾಮಗೋಪಾಲ್ ವರ್ಮಾ ತಮ್ಮ ಟ್ವೀಟ್ ನಲ್ಲಿ ನಿಮ್ಮೆಲ್ಲರಿಗೂ ಅತೃಪ್ತಿಯ ಶಿವರಾತ್ರಿಯ ಶುಭಾಶಯಗಳು. ನೀವು ದ್ವೇಷಿಸುವ ವ್ಯಕ್ತಿ ಈ ಪೋಟೋದಲ್ಲಿದ್ದರೆ ಅದು ಕಾಕತಾಳೀಯ ಅಷ್ಟೆ, ಶಿವನಿಗೆ ನಮಸ್ಕಾರ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಗೆ ಪರ-ವಿರೋಧ ಕಮೆಂಟ್ ಗಳು ಬರುತ್ತಿದ್ದು ಈ ನಿಮ್ಮ ನಡೆ ಸರಿಯಲ್ಲ ಎಂದು ವರ್ಮಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top