ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮ್ಯಾನ್ ರಿಷಬ್ ಪಂತ್ ಹೊಡೆದ ರಿವರ್ಸ್ ಸ್ಕೂಪ್ ಕಂಡು ಮಾಜಿ ಆಟಗಾರರು ಸಹಿತ ಕ್ರೀಡಾಭಿಮಾನಿಗಳು ದಂಗಾಗಿದ್ದಾರೆ.
That shot!! ‘This is Rishabh Pant’ 🇮🇳🏴 #INDvENG pic.twitter.com/ebAHCKITyB
— Chloe-Amanda Bailey (@ChloeAmandaB) March 12, 2021
ಜೋಫ್ರಾ ಆರ್ಚರ್ ಎಸೆದ ಇನ್ನಿಂಗ್ಸ್ನ ನಾಲ್ಕನೇ ಓವರ್ನಲ್ಲಿ ರಿವರ್ಸ್ ಸ್ವೀಪ್ ಮೂಲಕ ರಿಷಭ್ ಪಂತ್ ಸಿಕ್ಸರ್ ಬಾರಿಸಿದರು. ಅತಿ ಒತ್ತಡದ ಪವರ್ ಪ್ಲೇ ಸನ್ನಿವೇಶದಲ್ಲೂ ಪಂತ್ ಆಯ್ಕೆ ಮಾಡಿಕೊಂಡಿರುವ ಹೊಡೆತದ ಭಂಗಿಯು ಎಲ್ಲರನ್ನು ನಿಬ್ಬೇರಗಾಗಿಸಿದೆ.
Reverse Sweep Pant in action#INDVsENG pic.twitter.com/dka3oadN84
— S U R Y A (@GenuineViratFan) March 12, 2021
ಕ್ರಿಕೆಟ್ ಪಂಡಿತರು ಪಂತ್ ಧೈರ್ಯವನ್ನು ಮೆಚ್ಚಿದ್ದಾರೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ಇದಕ್ಕೆ ಸಮಾನವಾದ ರೀತಿಯಲ್ಲಿ ಸಿಕ್ಸರ್ ಸಿಡಿಸಿದ್ದರು.
#RishabPant Reverse Sweep Against Archer
Every Cricket Lover Must Watch#INDvsENG#pant#ishankishan #wonby8 #trendz #INDvsENG_2021 pic.twitter.com/MVqxpv2XB1— Itz_karanKapoor (@iamkarankapoor1) March 12, 2021
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ (ಮಾರ್ಚ್ 12ರಂದು) ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಹಣಾಹಣಿಯಲ್ಲಿ ಆರಂಭಿಕ ಆಘಾತ ತಂಡಿದ್ದ ಭಾರತ ತಂಡದ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಪಂತ್ 23 ಎಸೆತಗಳಲ್ಲಿ 2 ಫೋರ್ ಮತ್ತು 1 ಸಿಕ್ಸರ್ನೊಂದಿಗೆ 21 ರನ್ ಗಳಿಸಿ ಚೇತರಿಕೆ ನೀಡಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
