fbpx
ಸಮಾಚಾರ

ಎರಡು ದಿನಕ್ಕೆ ರಾಬರ್ಟ್ ಚಿತ್ರದ ಒಟ್ಟು ಗಳಿಕೆ ಎಷ್ಟು ಗೊತ್ತಾ?

ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ಅದ್ದೂರಿಯಾಗಿ ತೆರೆಗೆ ಬಂದಿದೆ. ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಬಿಡುಗೆಯಾಗಿರುವ ರಾಬರ್ಟ್ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ರಾಬರ್ಟ್ ಎರಡನೇ ದಿನದ ಕಲೆಕ್ಷನ್ ರಿಪೋರ್ಟ್ ಹೊರಬಿದ್ದಿದೆ.

 

 

ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಎರಡನೇ ದಿನ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ 12.78 ಕೋಟಿ ಗಳಿಕೆ ಕಂಡಿದೆ. ಮೊದಲ ದಿನ 17.24 ಕೋಟಿ ಬಾಚಿಕೊಂಡಿತ್ತು. ಈಗ ಎರಡು ದಿನಕ್ಕೆ ಕರ್ನಾಟಕದಲ್ಲಿ 30.05 ಕೋಟಿ ಆಗಿದೆ. ಇದು ಕನ್ನಡ ಚಿತ್ರದ ಮಟ್ಟಿಗೆ ಹೊಸ ದಾಖಲೆಯಾಗಿದೆ.

ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಆಂಧ್ರದ 433 ಹಾಗೂ ತೆಲಂಗಾಣದ 407 ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಅಲ್ಲೂ ‘ರಾಬರ್ಟ್’ ದರ್ಬಾರ್ ಏನು ಕಮ್ಮಿ ಇರಲಿಲ್ಲ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ‘ರಾಬರ್ಟ್’ ಮೊದಲ ದಿನ 3.12 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ತೆಲುಗು ವರ್ಷನ್ ನ ಎರಡನೇ ದಿನದ ಗಳಿಕೆ ಇನ್ನಷ್ಟೇ ಹೊರಬರಬೇಕಾಗಿದೆ,.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top