fbpx
ಸಮಾಚಾರ

ಹಿಂದೂಗಳ ಕೆಂಗಣ್ಣಿಗೆ ಗುರಿಯಾದ ಸೋನು ಸೂದ್ ಮಾಡಿದ ಶಿವರಾತ್ರಿ ಟ್ವೀಟ್

ಕೊರೋನಾ ಕಾಲದಲ್ಲಿ ಹಲವರ ಪಾಲಿಗೆ ಬಾಲಿವುಡ್ ನಟ ಸೋನು ಸೂದ್ ಅಕ್ಷರಶಃ ದೇವದೂತನಾಗಿ ಕಾಣಿಸಿಕೊಂಡಿದ್ದರು. ಯಾರೆಲ್ಲಾ ಕಷ್ಟದಲ್ಲಿದ್ದಾರೋ ಅವರಿಗೆ ತಮ್ಮ ಕೈಯಿಂದ ಸಾಧ್ಯವಾದ ಸಹಾಯವನ್ನು ಮಾಡುತ್ತಾ ಬಂದಿದ್ದರು ಸೋನು ಸೂದ್. ಆದರೆ ಈಗ ಆ ಒಂದು ಟ್ವಿಟರ್ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಹಾಶಿವರಾತ್ರಿಯ ದಿನದಂದು ಸಾಕಷ್ಟು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣ ಹಾಗೂ ವಿವಿಧ ವೇದಿಕೆಗಳಲ್ಲಿ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ಕೋರಿದ್ದಾರೆ. ಆದರೆ ಬಾಲಿವುಡ್​ ನಟ ಸೋನು ಸೂದ್​ ಮಹಾಶಿವರಾತ್ರಿಯಂದು ಟ್ವಿಟರ್​ನಲ್ಲಿ ಜನರಿಗೆ ಸಲಹೆ ನೀಡಲು ಹೋಗಿ ಹಿಂದೂಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

 

 

ಮಹಾ ಶಿವರಾತ್ರಿಯ ಆಚರಣೆ ಕುರಿತಾಗಿ ಟ್ವೀಟ್ ಮಾಡಿರುವ ನಟ ಸೋನು ಸೂದ್ ಮಹಾ ಶಿವರಾತ್ರಿಯ ಪ್ರಯುಕ್ತ ಶಿವನ ಚಿತ್ರಗಳನ್ನು ಫಾರ್ವರ್ಡ್ ಮಾಡುವ ಬದಲು ಅಗತ್ಯವಿರುವ ಯಾರಿಗಾಗದರೂ ಸಹಾಯ ಮಾಡಿ ಎಂದಿದ್ದಾರೆ

ಆದರೆ ಇವರ ಈ ಸಂದೇಶ ಹಲವರಲ್ಲಿ ಅಸಮಾಧಾನವನ್ನು ಉಂಟುಮಾಡಿದ್ದು, ವಿವಿಧ ರೀತಿಯಲ್ಲಿ ಟ್ರೋಲ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ನಟನ ಈ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿದ್ದು, “ನಮ್ಮ ಹಬ್ಬ ನಮ್ಮ ಇಷ್ಟ” ಎಂಬುದಾಗಿ ಹೇಳಿದ್ದಾರೆ.

ಇನ್ನೊಬ್ಬ ವ್ಯಕ್ತಿ ಇವರ ಸಂದೇಶಕ್ಕೆ ಟ್ವೀಟ್ ಮೂಲಕ ಪ್ರತ್ರಿಕ್ರಿಯೆ ನೀಡಿದ್ದು, ನಮಗೆಲ್ಲರಿಗೂ ನಾವು ಹೇಗೆ ನಮ್ಮ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಚೆನ್ನಾಗಿ ತಿಳಿದಿದೆ. ನೀವು ನಮಗೆ ಬುದ್ಧಿವಾದ ಹೇಳುವ ಅವಶ್ಯಕತೆ ಇಲ್ಲ, ಹಿಂದುಗಳ ಹಬ್ಬ ಎಂದು ಬಂದಾಗ ಇಂತಹ ಒಂದಲ್ಲಾ ಒಂದು ಕಿರಿಕಿರಿ ಕಂಡುಬರುತ್ತದೆ . ಆದರೆ ಇನ್ನುಳಿದ ಯಾವುದೇ ಧರ್ಮದ ಆಚರಣೆಗಳಲ್ಲಿ ಇದು ಕಂಡುಬರುವುದಿಲ್ಲ ಏಕೆ… ಏಕೆ.. ಏಕೆ.. ಎಂಬುದಾಗಿ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top