fbpx
ಸಮಾಚಾರ

ಸದ್ದಿಲ್ಲದೇ ಚಿತ್ರರಂಗಕ್ಕೆ ಕಾಲಿಟ್ಟ ಟಿಕ್‌ಟಾಕ್ ಬೆಡಗಿ: ಬಿಗ್‌ಬಾಸ್ ಸ್ಪರ್ಧಿ ಧನುಶ್ರೀ ಈಗ ಹೀರೋಯಿನ್!

ಈ ಬಿಗ್‌ಬಾಸ್ ಎಂಬ ರಿಯಾಲಿಟಿ ಶೋ ಅಂದರೆ ಹಾಗೇನೆ. ಇದರ ಸದಸ್ಯರಾಗಿರುವವರು ಮನೆಯೊಳಗಿದ್ದರೂ ಸದ್ದು-ಸುದ್ದಿ, ಮನೆಯ ಹೊರಗೆ ಬಂದರೂ ಸೌಂಡು! ಒಟ್ಟಿನಲ್ಲಿ ಇವರೇ ಪ್ರಚಾರದಿಂದ ದೂರವುಳಿಯುವುದಿಲ್ಲವೋ ಅಥವಾ ವಿವಾದಗಳು ಇವರಿಂದ ದೂರ ಹೋಗುವುದಿಲ್ಲವೋ ದೇವರೇ ಬಲ್ಲ.

ಅದೇನೆ ಇರಲಿ, ಈಗಿನ ಸುದ್ದಿ ಎಂದರೆ ಕಳೆದ ವಾರವಷ್ಟೇ ಕನ್ನಡ ಬಿಗ್ ಬಾಸ್-8 ಆವೃತ್ತಿಯಿಂದ ಎಲಿಮಿನೇಟ್ ಆಗಿದ್ದ ಧನುಶ್ರೀ ಈಗ ಹೀರೋಯಿನ್ ಆಗಿ ಬಡ್ತಿ ಪಡಿಯುತ್ತಿದ್ದಾರೆ. ಮನೆಯಿಂದ ಹೊರ ಬಂದು, ಒಂದು ವಾರ ಕಳೆಯುಷ್ಟರಲ್ಲಿಯೇ ಹೆಸರಿಡದ ಚಿತ್ರಕ್ಕೆ ಧನುಶ್ರೀ ಸಹಿ ಮಾಡಿದ್ದಾರೆ.

 

 

ಇನ್ನೂ ಹೆಸರಿಡದ ಕನ್ನಡ ಚಿತ್ರವೊಂದರಲ್ಲಿ ಧನುಶ್ರೀ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ತೆಲುಗು ನಟ ಅಶ್ವಿನ್ ಹೀರೋ ಆಗಿರುವ ಚಿತ್ರಕ್ಕೆ ಧನುಶ್ರೀ ನಾಯಕಿಯಾಗಿದ್ದಾರೆ. ರೋಮ್ಯಾಂಟಿಕ್ ಲವ್ ಸ್ಟೋರಿ ಹೊಂದಿರುವ ಚಿತ್ರದ ಕೆಲ ಭಾಗದ ಚಿತ್ರೀಕರಣ ಈಗಾಗಲೇ ನಡೆದಿದೆ. ಸದ್ಯದಲ್ಲೇ ಶೂಟಿಂಗ್ ಗೆ ಮತ್ತೆ ಚಾಲನೆ ಸಿಗಲಿದ್ದು, ಇತರೆ ಸನ್ನಿವೇಶಗಳ ಚಿತ್ರೀಕರಣ ಹಾಗೂ ಸಾಂಗ್ ಶೂಟಿಂಗ್ ನಲ್ಲಿ ಧನುಶ್ರೀ ಪಾಲ್ಗೊಳ್ಳುತ್ತಾರೆ.

ಚಿತ್ರದಲ್ಲಿರುವ ನಟಿ ಪಾತ್ರ ಧನುಶ್ರೀಗೆ ತುಂಬಾ ಹತ್ತಿರವಾಗಿರುವ ಕಾರಣ ಸಿನಿಮಾ ಒಪ್ಪಿಕೊಂಡಿದ್ದಾರಂತೆ. ‘Something new coming up’ ಎಂದು ಧನುಶ್ರೀ ಇನ್ ಸ್ಟಾ ಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top