fbpx
ಸಮಾಚಾರ

ಬಿಗ್ ಬಾಸ್ 8 :ಬಿಗ್ ಮನೆಯಿಂದ ಮತ್ತೊಬ್ಬ ಸೆಲೆಬ್ರಿಟಿ ಔಟ್

ಎರಡನೇ ವಾರದಲ್ಲಿ ಬಿಗ್‌ ಬಾಸ್‌ ಮನೆಯಿಂದ ನಟಿ, ನಿರ್ಮಾಪಕಿ, ರಂಗಭೂಮಿ ಕಲಾವಿದೆ ನಿರ್ಮಲಾ ಚೆನ್ನಪ್ಪ ಹೊರಬಂದಿದ್ದಾರೆ. ಅರ್ಥಾತ್, ಅವರಿಗೆ ಹೆಚ್ಚಿನ ವೋಟ್ ಸಿಗದೇ ಇರುವ ಕಾರಣ, ಎಲಿಮಿನೇಟ್ ಆಗಿದ್ದಾರೆ. ಆ ಮೂಲಕ ತಮ್ಮ ಆಟವನ್ನು 2ನೇ ವಾರಕ್ಕೆ ಕೊನೆಗೊಳಿಸಿದ್ದಾರೆ.

 

 

ಮನೆಯಲ್ಲಿರುವ ಸದಸ್ಯರುಗಳಲ್ಲಿ ನಿರ್ಮಲಾ ಕೊಂಚ ವಿಭಿನ್ನವಾಗಿಯೇ ಇರುತ್ತಿದ್ದರು. ಒಬ್ಬರೇ ಹೆಚ್ಚಾಗಿ ಇರುತ್ತಿದ್ದರು. ಅವರು ನಡೆದುಕೊಳ್ಳುವ ರೀತಿ, ಹೆಚ್ಚಿನವರಿಗೆ ಇಷ್ಟವಾಗುತ್ತಿರಲಿಲ್ಲ. ಅತೀ ಹೆಚ್ಚು ಚರ್ಚೆಗೊಳಗಾದ ಸದಸ್ಯರುಗಳಲ್ಲಿ ನಿರ್ಮಲಾ ಕೂಡ ಒಬ್ಬರು. ನಾಮಿನೇಷನ್‍ನಲ್ಲಿ ಹೆಚ್ಚು ಮತ ಕೂಡಾ ನಿರ್ಮಲಾ ಅವರಿಗೆ ಬಿದ್ದಿದ್ದವು. ಆದರೂ ಬಿಗ್‍ಬಾಸ್ ವೀಕ್ಷಕರು ನಿರ್ಮಲಾ ಚೆನ್ನಪ್ಪ ಅವರು ಕೈ ಹಿಡಿಯಲಿಲ್ಲ.

ಮೊದಲ ಹಾಗೂ ಎರಡನೇ ವಾರದಲ್ಲಿ ನಿರ್ಮಲಾ ನಾಮಿನೇಟ್ ಆಗಿದ್ದರು. ಆದರೆ, ಮೊದಲ ವಾರ ಸೇಫ್ ಆಗಿದ್ದರು. ಆಗ ಧನುಶ್ರೀ ಎಲಿಮಿನೇಟ್ ಆಗಿದ್ದರು. ಈ ವಾರ ನಿರ್ಮಲಾ ಜೊತೆ ವಿಶ್ವನಾಥ್, ಪ್ರಶಾಂತ್ ಸಂಬರಗಿ, ಗೀತಾ ಭಾರತಿ ಭಟ್, ಚಂದ್ರಕಲಾ ಮೋಹನ್ ಇದ್ದರು. ಇವರು ಸೇಪ್‌ ಆಗಿ ನಿರ್ಮಲಾ ಹೊರಬಿದ್ದಿದ್ದಾರೆ.

ಮನೆಯ ಸದಸ್ಯರಿಗೆ ನಿರ್ಮಲಾ ಮೇಲೆ ಮೊದಲಿನಿಂದಲೂ ಬೇಸರ ಇತ್ತು. ಅವರು ಸದಸ್ಯರ ಜೊತೆ ಹೊಂದಿಕೊಳ್ಳುತ್ತಿರಲಿಲ್ಲ, ಎಲ್ಲರ ಗಮನ ನನ್ನ ಮೇಲೆ ಇರಬೇಕು ಎಂಬ ಕಾರಣಕ್ಕೆ ತೋರಿಕೆಯ ಆಟಗಳನ್ನು ಆಡುತ್ತಿದ್ದರು. ಇದ್ಯಾವುದು ನೋಡುಗರಿಗೆ ಇಷ್ಟವಾಗಲಿಲ್ಲ. ಈ ಕಾರಣಕ್ಕೆ ಅವರಿಗೆ ನಿರೀಕ್ಷೆಯಂತೆ ವೋಟ್‌ಗಳು ಬರಲಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top