fbpx
ಸಮಾಚಾರ

ಮತ್ತೊಮ್ಮೆ ಅಪ್ಪ ಆಗ್ತಿದ್ದಾರೆ ಹರ್ಭಜನ್ ಸಿಂಗ್: 2ನೇ ಮಗುವಿನ ನಿರೀಕ್ಷೆಯಲ್ಲಿ ಹರ್ಭಜನ್ ಸಿಂಗ್-ಗೀತಾ ಬಸ್ರಾ

ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್‌ ಎರಡನೇ ಮಗುವಿಗೆ ಅಪ್ಪನಾಗುತ್ತಿದ್ದಾರೆ. ಟರ್ಬನೇಟರ್ ಖ್ಯಾತಿಯ ಭಜ್ಜಿ ಪತ್ನಿ, ನಟಿ ಗೀತಾ ಬಸ್ರಾ ಮತ್ತು ಭಜ್ಜಿ ತಾವು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸಾಮಾಜಿಕ ಜಾಲತಾಣದ ಮೂಲಕ ಘೋಷಿಸಿದ್ದಾರೆ. ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಇಬ್ಬರೂ ಈ ಸಂಗತಿ ತಿಳಿಸಿದ್ದಾರೆ.

 

 

ತಮ್ಮ ಮಗಳ ಮೂಲಕ ತಾವು ಮತ್ತೊಮ್ಮೆ ಪೋಷಕರಾಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ ಹರ್ಭಜನ್ ಸಿಂಗ್ ದಂಪತಿ. ಗೀತಾ ಬಸ್ರಾ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಗೀತಾ, ಹರ್ಭಜನ್ ಸಿಂಗ್ ಮತ್ತು ಪುತ್ರಿ ಹಿನಾಯ ಇದ್ದಾರೆ. ಪುತ್ರಿ ಹಿನಾಯ ಕೈಯಲ್ಲಿ ಕಪ್ಪು ಬಣ್ಣದ ಟಿ ಶರ್ಟ್ ಇದ್ದು, ಇದರಲ್ಲಿ ‘ಸೂನ್ ಟುಬಿ ಬಿಗ್ ಸಿಸ್ಟರ್’ (ಶೀಘ್ರ ಹಿರಿಯ ಸಹೋದರಿ ಅನ್ನಿಸಲಿದ್ದೇನೆ) ಎಂದು ಬರೆದುಕೊಂಡಿದೆ. ಪೋಸ್ಟ್‌ ಜೊತೆ ಕಮಿಂಗ್ ಸೂನ್ ಜುಲೈ 2021 (ಜುಲೈ 2021ಕ್ಕೆ ಬರಲಿದೆ) ಎಂದು ಬರೆದುಕೊಳ್ಳಲಾಗಿದೆ.

 

 

ಹರ್ಭಜನ್ ಮತ್ತು ಗೀತಾ ಮದುವೆ 2015 ಅಕ್ಟೋಬರ್ 29ರಂದು ಪಂಜಾಬ್‌ನ ಜಲಂದರ್‌ನಲ್ಲಿ ನಡೆದಿತ್ತು. ಸಾಂಸಾರಿಕ ಬದುಕಿನ ಪ್ರತಿಫಲವಾಗಿ ಈ ತಾರಾ ಜೋಡಿಗೆ 2016ರ ಜೂಲೈ ತಿಂಗಳಿನಲ್ಲಿ ಮಗಳು (ಹಿನಾಯ) ಜನಿಸಿದ್ದಳು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top