fbpx
ಸಮಾಚಾರ

ಯಾರಿಗೂ ಗೊತ್ತಾಗದ ಹಾಗೆ ಮಾರುವೇಷದಲ್ಲಿ ಥಿಯೇಟರ್‌ಗೆ ತೆರಳಿ ರಾಬರ್ಟ್ ಸಿನಿಮಾ ವೀಕ್ಷಿಸಿದ ನಟ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುತ್ತಿರುವ ರಾಬರ್ಟ್ ಸಿನಿಮಾ ದಾಖಲೆಯ ಕಲೆಕ್ಷನ್ ಮಾಡುತ್ತಿದೆ. ಈ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾರಿಗೂ ಗೊತ್ತಾಗದ ಹಾಗೆ ಮಾರುವೇಷದಲ್ಲಿ ಚಿತ್ರಮಂದಿರಕ್ಕೆ ತೆರಳಿ ಅಭಿಮಾನಿಗಳ ನಡುವೆ ಕುಳಿತು ಸಿನಿಮಾ ವೀಕ್ಷಿಸಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಮಾತನಾಡಿರುವ ದರ್ಶನ ಅವರು ಮಾರುವೇಷದಲ್ಲಿ ಸಿನಿಮಾ ವೀಕ್ಷಿಸಿದ ಬಗ್ಗೆ ಹೇಳಿದ್ದಾರೆ “ಕಳೆದ ದಿನ ಮಾರುವೇಶದಲ್ಲಿ ಸಿನಿಮಾ ಮಂದಿರಕ್ಕೆ ತೆರಳಿ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಣೆ ಮಾಡಿದ್ದೆ. ಈ ವೇಳೆ ಅಭಿಮಾನಿಗಳ ಶಿಲ್ಲೆ ಚಪ್ಪಾಳೆಗಳನ್ನು ಗಮನಿಸಿದ್ದೇನೆ. ಮುಂದಿನ ಸಿನಿಮಾಗಳಲ್ಲಿ ಶಿಲ್ಲೆ ಚಪ್ಪಾಳೆಗಳ ಇನ್ನಷ್ಟೂ ದೃಶ್ಯಗಳನ್ನು ಅಳವಡಿಸಿಕೊಳ್ಳುತ್ತೇವೆ” ಎಂದು ಡಿ ಬಾಸ್ ಹೇಳಿದ್ದಾರೆ.

ಸಿನಿಮಾಗೆ ನನ್ನ ಒಬ್ಬನಿಂದ ಯಶಸ್ಸು ಸಿಕ್ಕಿದ್ದಲ್ಲ. ಇದು ಟೀಮ್ ವರ್ಕ್. ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಉತ್ತಮವಾಗಿ ನಟಿಸಿದ್ದಾರೆ. ಸಿನಿಮಾದ ಸ್ಪೆಷಲ್ ಎಲಿಮೆಂಟ್, ತೊದಲಿಕೊಂಡು ಮಾಡಿದ ಪಾತ್ರ ತುಂಬಾ ಖುಷಿಕೊಟ್ಟಿದೆ ಎಂದು ಅನುಭವ ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top