fbpx
ಸಮಾಚಾರ

ಗೀತಾ ಶಿವರಾಜ್​ಕುಮಾರ್​​ ಕಾಂಗ್ರೆಸ್​ ಸೇರ್ಪಡೆ ವಿಚಾರ; ಡಿಕೆಶಿ ಮನೆಗೆ ನಟ ಶಿವರಾಜ್​ಕುಮಾರ್ ಭೇಟಿ

ಮಾಜಿ ಮುಖ್ಯಮಂತ್ರಿ ದಿವಂಗತ ಎಸ್​.ಬಂಗಾರಪ್ಪ ಅವರ ಕಿರಿಯ ಪುತ್ರ, ಮಾಜಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್​ ತೊರೆದು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಬೆನ್ನಲ್ಲೇ ಅವರ ಸಹೋದರಿ ಗೀತಾ ಶಿವರಾಜಕುಮಾರ್ ಅವರು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎಂದು ಸುದ್ದಿಯಾಗಿತ್ತು,. ಅದಕ್ಕೆ ಪೂರಕವಾಗಿ ಇದೀಗ ಗೀತಾ ಅವರ ಪತಿ ಹಾಗೂ ನಟ ಶಿವರಾಜ್​ಕುಮಾರ್​ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್, ಇದು ನನ್ನ ಪರ್ಸನಲ್ ವಿಸಿಟ್ ಅಷ್ಟೇ. ಇಲ್ಲಿ ಯಾವುದೇ ರಾಜಕೀಯ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಡಿಕೆಶಿ ಮಾತನಾಡಿ, ಶಿವರಾಜ್ ಕುಮಾರ್ ಕುಟುಂಬ ನಮ್ಮ ಕುಟುಂಬ ಆತ್ಮೀಯವಾಗಿ ಇದ್ದೇವೆ. ನಾವು ಆತ್ಮೀಯರು ನಮ್ಮ ಕುಟುಂಬಕ್ಕೂ ಅವರಿಗೆ ಆತ್ಮಿಯತೇ ಇದೆ. ಅವರು ಏನಕ್ಕೆ ಬಂದಿದ್ದರು, ಯಾವ ವಿಚಾರ ಮಾತಾಡಿದ್ವಿ ಅಂತಾ ಡಿಸ್ ಕ್ಲೋಸ್ ಮಾಡಲ್ಲ ಎಂದರು.

ಇದೆ ವೇಳೆ ಗೀತಾ ಶಿವರಾಜ್ ಕುಮಾರ್ ಅವರು ಕಾಂಗ್ರೆಸ್ ಪಕ್ಷ ಸೇರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ “ಗೀತಾ ಶಿವರಾಜ್​ಕುಮಾರ್ ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ನಾನು ಮಾತಾಡಲ್ಲ. ಮಧುಬಂಗಾರಪ್ಪ ಮಾತಾಡಬಹುದು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರ್ತಾರಾ? ಎಂಬುದರ ಬಗ್ಗೆ ನೀವೆ ಕಾದು ನೋಡಿ” ಎಂದರು.

ಮಾ.12ರಂದು ಡಿಕೆಶಿ ಮನೆಗೆ ಬೇಟಿ ನೀಡಿದ್ದ ಜೆಡಿಎಸ್​ನ ಮಾಜಿ ಶಾಸಕ ಮಧುಬಂಗಾರಪ್ಪ, ನಾನು ಮಾತ್ರವಲ್ಲ ನನ್ನ ಅಕ್ಕ ನನ್ನ ಅಕ್ಕ ಗೀತಾ ಶಿವರಾಜ್​ಕುಮಾರ್​ ಕೂಡ ಕಾಂಗ್ರೆಸ್​ಗೆ ಬರಲಿದ್ದಾರೆ. ಮಾತುಕತೆ ಆಗಿದೆ. ಬಂದಿದ್ದಾರೆ ಅಂದುಕೊಳ್ಳಿ. ಡಿಕೆಶಿ ಅಧ್ಯಕ್ಷತೆಯಲ್ಲಿ ಕೆಲಸ ಮಾಡೋ ಅವಕಾಶ ಸಿಕ್ಕಿದೆ ಎಂದಿದ್ದರು. ಇಂದು ನಟ ಶಿವರಾಜ್​ ಕುಮಾರ್​ ಅವರೇ ಖುದ್ದು ಡಿಕೆಶಿ ಮನೆಗೆ ಭೇಟಿ ನೀಡಿರುವುದು ಸಹಜವಾಗಿಯೇ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top