fbpx
ಸಮಾಚಾರ

ಬಿಗ್​ಬಾಸ್​ ಸೀಸನ್ 08: ಮೂರನೇ ವಾರ ಮನೆಯಿಂದ ಹೊರಹೋಗಲು ಬರೋಬ್ಬರಿ 8 ಸದಸ್ಯರು ನಾಮಿನೇಟ್​

ಯಶಸ್ವಿ ಎರಡು ವಾರಗಳನ್ನು ಮುಗಿಸಿ ಮುನ್ನುಗ್ಗುತ್ತಿರುವ ಕನ್ನಡದ ಅತಿದೊಡ್ಡ ರಿಯಾಲಿಟಿ ಷೋ ಬಿಗ್ ಬಾಸ್ ನ ಮೂರನೇ ವಾರದ ಚಟುವಟಿಕೆಗಳು ಆರಂಭಗೊಂಡಿವೆ. ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದ ಹದಿನೇಳು ಜನರ ಪೈಕಿ ಈಗಾಗಲೇ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರನಡೆದಿದ್ದು ಸದ್ಯ ಮನೆಯಲ್ಲಿ ಹದಿನೈದು ಜನರು ಉಳಿದುಕೊಂಡಿದ್ದಾರೆ.

 

 

ಬಿಗ್ ಬಾಸ್ ಎಂಟನೇ ಸೀಸನ್‌ನ ಮೂರನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಆರಂಭವಾಗಿದ್ದು 9 ಸದಸ್ಯರು ದೊಡ್ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಈ ಒಂಬತ್ತು ಮಂದಿಯಲ್ಲಿ ಒಬ್ಬ ಸದದ್ಯ ಈ ವಾರಾಂತ್ಯ ಮನೆಯಿಂದ ಹೊರ ನಡೆಯಲಿದ್ದಾರೆ.

ಪ್ರಶಾಂತ್ ಸಂಬರಗಿ, ಅರವಿಂದ್, ನಿಧಿ, ವಿಶ್ವನಾಥ್, ದಿವ್ಯಾ ಉರುಡುಗ, ಸುಬ್ಬಯ್ಯ, ಗೀತಾ, ರಘು, ಹಾಗೂ ದಿವ್ಯಾ ಸುರೇಶ್ ನಾಮಿನೇಟ್ ಪಟ್ಟಿಯಲ್ಲಿ ಇದ್ದಾರೆ. ಇವರ ಜೊತೆ ಶಂಕರ್ ಅಶ್ವತ್ಥ್ ಕೂಡ ನಾಮಿನೇಟ್ ಆಗಿದ್ದರು. ಆದರೆ ಬಿಗ್‌ ಬಾಸ್‌ ಮನೆಯ ನಾಯಕ ರಾಜೀವ್ ತಮ್ಮ ವಿಶೇಷ ಅಧಿಕಾರದ ಮೂಲಕ ಅವರನ್ನು ಉಳಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top