fbpx
ಸಮಾಚಾರ

ಮೊದಲ ಮಗುವಿಗೆ ತಾಯಿಯಾದ ಬಹುಭಾಷಾ ನಟಿ ಭಾಮಾ: ಸಂಭ್ರಮದಲ್ಲಿ ‘ಮೊದಲಾಸಲ’ ನಟಿ

‘ಮೊದಲಾಸಲ’, ‘ಶೈಲೂ’, ‘ರಾಗ’ ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿರುವ ನಟಿ ಭಾಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪುಟ್ಟ ಮಹಾಲಕ್ಷ್ಮಿ ಆಗಮನದ ಬಗ್ಗೆ ತಿಳಿಯುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

ನಟಿ ಭಾಮಾ ಗರ್ಭಿಣಿ ಎಂಬ ಸುದ್ದಿ ಕಳೆದ ವರ್ಷದಿಂದಲೂ ಕೇಳಿಬರುತ್ತಿತ್ತು. ಆದರೆ, ಈ ಬಗ್ಗೆಯೂ ಭಾಮಾ ಮತ್ತು ಕುಟುಂಬ ಕ್ಲಾರಿಟಿ ಕೊಟ್ಟಿರಲಿಲ್ಲ. ಸೋಷಿಯಲ್ ಮೀಡಿಯಾದಲ್ಲೂ ಭಾಮಾ ಯಾವುದೇ ಫೋಟೋ ಹಂಚಿಕೊಂಡಿರಲಿಲ್ಲ. ಇದೀಗ ಹೆಣ್ಣು ಮಗುವಿಗೆ ಭಾಮಾ ತಾಯಿಯಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಈಗಲೂ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಅಧಿಕೃತ ಮಾಡಿಲ್ಲ. ಆದರೆ, ಹಲವು ಮಾಧ್ಯಮಗಳು ಭಾಮಾ ಮತ್ತು ಅರುಣ್ ದಂಪತಿ ಹೆಣ್ಣು ಮಗು ಸ್ವಾಗತಿಸಿರುವುದನ್ನು ಖಚಿತ ಪಡಿಸಿವೆ.

ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಭಾಮಾ ಕಾಲಿಟ್ಟಿದ್ದರು. ದುಬೈನಲ್ಲಿ ನೆಲೆಸಿರುವ ಬಿಸಿನೆಸ್ ಮ್ಯಾನ್ ಅರುಣ್ ಎಂಬುವರ ಜೊತೆಗೆ ಜನವರಿ 30, 2020 ರಂದು ಭಾಮಾ ವಿವಾಹ ನೆರವೇರಿತ್ತು. ಕೇರಳದಲ್ಲಿ ಇಬ್ಬರ ಮದುವೆ ಜರುಗಿತ್ತು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ತಮ್ಮ ವೈವಾಹಿಕ ಜೀವನದ ಬಗ್ಗೆ ಪ್ರೈವೇಟ್‌ ಆಗಿಟ್ಟರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top