fbpx
ಸಮಾಚಾರ

ಬಹುಕಾಲದ ಗೆಳತಿ ಜೊತೆಗೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಬುಮ್ರಾ: ಇಲ್ಲಿವೆ ಮದುವೆ ಫೋಟೋಸ್

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಮದುವೆ ಊಹಾಪೋಹಕ್ಕೆ ತೆರೆಬಿದ್ದಿದೆ. ಸದ್ದಿಲ್ಲದೆ ಬುಮ್ರಾ, ಮಾಡೆಲ್, ನಿರೂಪಕಿ ಸಂಜನಾ ಗಣೇಶನ್ ಮದುಯಾಗಿದ್ದಾರೆ. ‌ ಜಸ್‌ಪ್ರೀತ್‌ ಬುಮ್ರಾ, ತಮ್ಮ ಪ್ರೇಯಸಿ ಹಾಗೂ ಜನಪ್ರಿಯ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್‌ ಅವರನ್ನು ಸೋಮವಾರ ವಿವಾಹವಾಗಿದ್ದಾರೆ.

 

 

ಗೋವಾದ ರೆಸಾರ್ಟ್‌ ಒಂದರಲ್ಲಿ ಖಾಸಗಿಯಾಗಿ ನಡೆದ ವಿವಾವ ಮಹೋತ್ಸವದಲ್ಲಿ ಕುಟುಂಬಸ್ತರು ಸೇರಿದಂತೆ ಕೇವಲ 20 ಮಂದಿ ಮಾತ್ರವೇ ಭಾಗಿಯಾಗಿದ್ದರು ಎಂದು ವರದಿಗಳು ಹೇಳಿವೆ. ಇನ್ನು ವಿವಾಹದ ಶುಭ ಸುದ್ದಿಯನ್ನು ಸಂಜನಾ ಮತ್ತು ಬುಮ್ರಾ ಏಕಕಾಲದಲ್ಲಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ.

 

 

“ಪ್ರೀತಿ, ಅದು ಮೌಲ್ಯಯುತವಾದದ್ದು ಎನಿಸಿದರೆ, ಅದಕ್ಕೆ ಸರಿಯಾದ ದಿಕ್ಕು ತೋರಿಸಿ,” ಪ್ರೀತಿಯೊಂದಿಗೆ ಬದುಕಿನ ಹೊಸ ಪಯಣ ಆರಂಭಿಸಿದ್ದೇವೆ. ನಮ್ಮ ಜೀವನದಲ್ಲಿ ಅತ್ಯಂತ ಸಂತಸದ ದಿನ ಇದಾಗಿದ್ದು, ನಿಮ್ಮೆಲ್ಲರೊಂದಿಗೆ ನಮ್ಮ ವಿವಾಹದ ಸುದ್ದಿ ಹಂಚಿಕೊಳ್ಳುತ್ತಿರುವುದು ನಿಮ್ಮೆಲ್ಲರ ಆಶೀರ್ವಾದ ಪಡೆದಂತಹ ಅನುಭವವಾಗುತ್ತಿದೆ,” ಎಂದು ಸಂಜನಾ ಮತ್ತು ಬುಮ್ರಾ ಏಕಕಾಲಕ್ಕೆ ತಮ್ಮ ಸೋಷಿಯಲ್ ಮೀಡಿಯಾ ಗೋಡೆಗಳ ಮೇಲೆ ಬರೆದಕೊಂಡಿದ್ದಾರೆ.

 

 

ಯಾರು ಈ ಸಂಜನಾ ಗಣೇಶನ್​?
28 ವರ್ಷದ ಸಂಜನಾ ಗಣೇಶನ್​ ಮೂಲತಃ ಪುಣೆಯವರು. ಮಾಡೆಲಿಂಗ್​ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಸಂಜನಾ 2014ರಲ್ಲಿ ಫೆಮಿನಾ ಮಿಸ್​ ಇಂಡಿಯಾ ಸೌಂದರ್ಯ ಸ್ಪರ್ಧೆಯ ಫೈನಲಿಸ್ಟ್​ ಕೂಡ ಆಗಿದ್ದಾರೆ. 2016ರಲ್ಲಿ ಸ್ಟಾರ್​ಸ್ಪೋರ್ಟ್ಸ್​ಗೆ ಕ್ರೀಡಾ ನಿರೂಪಕಿಯಾಗಿ ಸೇರ್ಪಡೆಯಾಗಿದ್ದಾರೆ. 2014ರಲ್ಲಿ ಎಂಟಿವಿಯ ರಿಯಾಲಿಟಿ ಶೋ ಒಂದರಲ್ಲಿ ಸಂಜನಾ ಭಾಗವಹಿಸಿದ್ದರು. 2016ರ ಈಚೆಗೆ ಕ್ರೀಡೆಗೆ ಸಂಬಂಧಪಟ್ಟ ಶೋ, ಸಂದರ್ಶನಗಳಲ್ಲಿ ಸಂಜನಾ ಸಕ್ರಿಯವಾಗಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top