fbpx
ಸಮಾಚಾರ

ಜೊಮ್ಯಾಟೋ ಡೆಲಿವರಿ ಬಾಯ್​ ಬೆಂಬಲಕ್ಕೆ ನಿಂತ ದುನಿಯಾ ವಿಜಯ್:​ ಘಟನೆ ಮೌನ ಮುರಿದ ನಟ ಹೇಳಿದ್ದೇನು?

ಮಹಿಳೆ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಜೊಮ್ಯಾಟೊ ಸಂಸ್ಥೆಯಲ್ಲಿ ಡಿಲೆವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದ ಕಾಮರಾಜ್​ ಪರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಬೆಂಬಲ ವ್ಯಕ್ತವಾಗುತ್ತಿದೆ. ಈ ಘಟನೆಯಿಂದ ನೊಂದಿರುವ ವ್ಯಕ್ತಿ ಕಾಮರಾಜ್​ ಅವರಿಗೆ ನ್ಯಾಯ ಸಿಗಬೇಕೆಂದು ಸಾಕಷ್ಟು ಮಂದಿ ಸೋಶಿಯಲ್​ ಮೀಡಿಯಾದ ಮೂಲಕ ಬೆಂಬಲ ನೀಡುತ್ತಿದ್ದಾರೆ. ಇದೀಗ ಕನ್ನಡದ ನಟ ‘ದುನಿಯಾ’ ವಿಜಯ್​ ಕೂಡ ಈ ಚರ್ಚೆಗೆ ಧ್ವನಿಗೂಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ದುನಿಯಾ ವಿಜಯ್ ಅವರು ಕಾಮರಾಜ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ‘ಸುಮಾರು 4 ದಿನಗಳಿಂದ ಸುದ್ದಿಯಲ್ಲಿರುವ Zomato ಹುಡುಗ ಕಾಮರಾಜ್ ಪ್ರಕರಣವನ್ನು ತಿಳಿದುಕೊಂಡೆ. ಕರ್ನಾಟಕ ಪೊಲೀಸರು ನಿಷ್ಪಕ್ಷಪಾತವಾದ ತನಿಖೆ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ. ಒಂದು ವೇಳೆ ಆತ ನಿರಪರಾಧಿ ಆಗಿದ್ದರೆ ಆತನ ಬೆಂಬಲಕ್ಕೆ ನಾವೆಲ್ಲ ಬೆನ್ನೆಲುಬಾಗಿ ನಿಲ್ಲೋಣ. ಯಾವುದೇ ಕಾರಣಕ್ಕೂ ಆತನಿಗೆ ಅನ್ಯಾಯ ಆಗಬಾರದು ಎಂದು ಬಯಸುತ್ತೇನೆ. ಆತನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಇರುವುದರಿಂದ ಈತನ ದೂರನ್ನು ಸಹ ಪರಿಗಣಿಸಿ, ಅದರಲ್ಲೂ ಸಹ ತನಿಖೆಯಾಗಬೇಕೆಂದು ಕೇಳಿಕೊಳ್ಳುತ್ತೇನೆ. ಕಾಮರಾಜ್ ಪರವಾಗಿ ನಿಂತಿರುವ ರೂಪೇಶ್ ರಾಜಣ್ಣ ಅವರಿಗೆ ನನ್ನ ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು’ ಎಂದು ದುನಿಯಾ ವಿಜಯ್​ ಪೋಸ್ಟ್​ ಮಾಡಿದ್ದಾರೆ.

ಏನಿದು ಘಟನೆ?
ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮಾಡೆಲ್‌ ಹಿತಾಶಾ, ತನ್ನ ಮೇಲೆ ಝೊಮ್ಯಾಟೋ ಡೆಲಿವರಿ ಬಾಯ್‌ ಕಾಮರಾಜ್‌ ಮೂಗಿಗೆ ಗುದ್ದಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು. ಝೊಮ್ಯಾಟೋ ಕಾಮರಾಜ್‌ ಅವರನ್ನು ಕೆಲಸದಿಂದ ಕಿತ್ತು ಹಾಕಿತ್ತು. ಕಾಮರಾಜ್‌ ಬಂಧನವಾಗಿತ್ತು. ಇದೀಗ ಜಾಮೀನು ಪಡೆದು ಹೊರಬಂದಿರುವ ಕಾಮರಾಜ್‌, ತಾನು ಆಕೆಯ ಮೇಲೆ ಹಲ್ಲೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿ ಈ ಕಾರಣಕ್ಕೆ ತನ್ನ ಕೆಲಸ ಹೋಗಿದ್ದರ ಕುರಿತು ನೋವು ತೋಡಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top