fbpx
ಸಮಾಚಾರ

ಚೊಚ್ಚಲ ಮಗುವಿಗೆ ಜನ್ಮ ನೀಡಿದ ಮಯೂರಿ: ಅಮ್ಮ ಆದ ಖುಷಿಯಲ್ಲಿ ನಟಿ

ಕನ್ನಡ ಚಿತ್ರರಂಗದ ಖ್ಯಾತ ನಟಿ ಮಯೂರಿ ಅವರು ಚೊಚ್ಚಲ ಮಗುವಿಗೆ ತಾಯಿಯಾಗಿದ್ದಾರೆ. ಮಯೂರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಾರ್ಚ್ 15, 2021ರಂದು ಅವರು ಗಂಡು ಮಗುವಿನ ತಾಯಿಯಾಗಿದ್ದಾರೆ. ಈ ಕುರಿತು ಮಯೂರಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

 

 

ಪುಟ್ಟ ಕಂದಮ್ಮನ ಬೆರಳು ಹಿಡಿದುಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮಯೂರಿ ತಮಗೆ ಮಗು ಜನಿಸಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಮಗೆ ಪ್ರೀತಿ ನೀಡಿ ಅರಸಿ ಆಶೀರ್ವಾದ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

“ನಮಗೆ ಗಂಡು ಮಗುವಿನ ಜ್ಞಾನವಾಗಿದೆ. ನಮ್ಮ ಪುಟ್ಟ ಕೊನೆಗೂ ಬಂದಿದ್ದಾನೆ. ಮತ್ತೊಂದು ಸುಂದರವಾದ ಪ್ರಯಾಣವನ್ನು ಪ್ರಾರಂಭಿಸುವ ಈ ಸುಂದರವಾದ ಕ್ಷಣದ ಸಂತೋಷವನ್ನು ಮಾತುಗಳಲ್ಲಿ ವರ್ಣಿಸಲು ಪದಗಳಿಲ್ಲ. ನಿಮ್ಮ ಪ್ರೀತಿ ಹಾರೈಕೆಗೆ ಧನ್ಯವಾದಗಳು” ಎಂದು ಮಯೂರಿ ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಇತ್ತೀಚೆಗಷ್ಟೆ ತಾವು ಗರ್ಭಿಣಿಯಾಗಿರುವ ವಿಷಯವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು. ಇತ್ತೀಚಿಗಷ್ಟೇ ಮಯೂರಿಯವರ ಸೀಮಂತ ಶಾಸ್ತ್ರ ಸರಳವಾಗಿ ನೆರವೇರಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top