fbpx
ಸಮಾಚಾರ

ಬೆಂಗಳೂರು ಜಿಲ್ಲಾ ಪಂಚಾಯತ್ ನೇಮಕಾತಿ 2021 – ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ನರೆಗಾ ಯೋಜನೆಯನ್ನು (nrega scheme) ಪರಿಣಾಮಕಾರಿಯಾಗಿ ಜಾರಿ ತರಲು ವಿವಿಧ ಹುದ್ದೆಗಳ ಭರ್ತಿಗೆ ನಿರ್ಧರಿಸಲಾಗಿದೆ. ಈ ಸಂಬಂಧ ಅಧಿಸೂಚನೆ ಕೂಡಾ ಹೊರಡಿಸಲಾಗಿದೆ. ಹುದ್ದೆಯ ಹೆಸರು, ವಿದ್ಯಾರ್ಹತೆ, ಇತರೆ ಅರ್ಹತೆ, ಪ್ರಮುಖ ದಿನಾಂಕಗಳು ಒಳಗೊಂಡ ಪ್ರಮುಖ ಮಾಹಿತಿಗಳು ಇಲ್ಲಿವೆ.

ಹುದ್ದೆಗಳ ವಿವರ
1.ತಾಂತ್ರಿಕ ಸಂಯೋಜಕರು 03 ಹುದ್ದೆ
2. ತಾಲೂಕು ಐ.ಇ.ಸಿ ಸಂಯೋಜಕರು, 04 ಹುದ್ದೆ
3. ತಾಂತ್ರಿಕ ಸಹಾಯಕರು (ತೋಟಗಾರಿಕೆ) 01 ಹುದ್ದೆ
4. ತಾಂತ್ರಿಕ ಸಹಾಯಕರು (ಕೃಷಿ) 01 ಹುದ್ದೆ

ವಿದ್ಯಾರ್ಹತೆ:
ಈ ಮೇಲೆ ತಿಳಿಸಿದ ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು BE/M.Tech (Civil), UG/PG in MSW/Mass Communication, BSc/MSc (Agriculture/Horticulture) ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 21 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 40 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ವೇತನ ಶ್ರೇಣಿ:
– ತಾಂತ್ರಿಕ ಸಂಯೋಜಕರು ಹುದ್ದೆಗೆ ಮಾಸಿಕ 29,000/-
– ತಾಲ್ಲೂಕು ಐ.ಇ.ಸಿ ಸಂಯೋಜಕರು ಹುದ್ದೆಗೆ ಮಾಸಿಕ 20,000/- ರೂ ಮತ್ತು
– ತಾಂತ್ರಿಕ ಸಹಾಯಕರು (ಕೃಷಿ/ತೋಟಗಾರಿಕೆ) ಹುದ್ದೆಗೆ ಮಾಸಿಕ 24,000/-ರೂ ವೇತನವನ್ನು ನೀಡಲಾಗುವುದು.

ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತರು ವೆಬ್ ಸೈಟ್‌ನಲ್ಲಿ ಅರ್ಜಿಗಳನ್ನು ಪಡೆದು ಖುದ್ದಾಗಿ, ಅಂಚೆ ಮೂಲಕ ಸಲ್ಲಿಕೆ ಮಾಡಬೇಕು. ಅರ್ಜಿ ನಮೂನೆಯನ್ನು bangalorerural.nic.in ಗೆ ಭೇಟಿ ನೀಡಿ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ನಂತರ ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆಗೆ ವಿಳಾಸ;
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಭವನ, ಬೀರಸಂದ್ರ (ಚಪ್ಪರದ ಕಲ್ಲು), ಕುಂದಾಣ ಹೋಬಳಿ, ದೇವನಹಳ್ಳಿ ತಾಲೂಕು 562110.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top