fbpx
ಸಮಾಚಾರ

“ಮಾಸ್ಟರ್‌ ಮೈಂಡ್‌, ರಿಂಗ್‌ಮಾಸ್ಟರ್‌ ಒಂದೇ ಫ್ರೇಮ್‌ನಲ್ಲಿ” – ಸಿ.ಡಿ ವಿಚಾರದಲ್ಲಿ ಡಿಕೆಶಿಗೆ ಬಿಜೆಪಿ ಡಿಚ್ಚಿ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಬಿಜೆಪಿ ಆರೋಪ ಮಾಡಿತ್ತು. ಇದೆಲ್ಲದರ ಸೂತ್ರಧಾರ ಡಿ.ಕೆ. ಶಿವಕುಮಾರ್ ಎಂದು ಪರೋಕ್ಷವಾಗಿ ಅವರತ್ತಲೇ ಬೆರಳು ತೋರಿಸಿತ್ತು. ಇದಕ್ಕೆ ಪೂರಕವಾಗಿ ಇಂದು ಡಿಕೆ ಶಿವಕುಮಾರ್ ಮತ್ತು ಜಾರಕಿಹೊಳಿ ಸೆಕ್ಸ್​ ಸಿಡಿ ಪ್ರಕರಣದ ಆರೋಪಿ ಜೊತೆಗಿರುವ ಫೋಟೋವೊಂದನ್ನು ಬಿಜೆಪಿ ಬಿಡುಗಡೆ ಮಾಡಿದೆ.

 

 

ಮಾಸ್ಟರ್‌ ಮೈಂಡ್‌ ಮತ್ತು ರಿಂಗ್‌ ಮಾಸ್ಟರ್‌ ಒಂದೇ ಫ್ರೇಮ್‌ನಲ್ಲಿ ಎಂದು ಹೇಳಿ ಬಿಜೆಪಿ ಸಿಡಿ ಪ್ರಕರಣ ಮುಖ್ಯ ಸೂತ್ರಧಾರ, ಮಾಜಿ ಪತ್ರಕರ್ತ ನರೇಶ್‌ ಗೌಡ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಒಟ್ಟಿಗೆ ಇರುವ ಫೋಟೋವನ್ನು ಟ್ವೀಟ್‌ ಮಾಡಿದೆ.

ಸಿ. ಡಿ. ಪ್ರಕರಣದ ಮಾಸ್ಟರ್ ಮೈಂಡ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಂದೇ ಫ್ರೇಮ್ ನಲ್ಲಿರುವುದನ್ನು ಬಿಡುಗಡೆ ಮಾಡಿರುವ ಬಿಜೆಪಿ, ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ? ಎಂದು ಪ್ರಶ್ನಿಸಿದೆ. ಮಾಸ್ಟರ್ ಮೈಂಡ್ ಮತ್ತು ರಿಂಗ್ ಮಾಸ್ಟರ್ ಒಂದೇ ಫ್ರೇಮ್ ನಲ್ಲಿ ಸಿಲುಕಿಕೊಂಡಿರುವುದಕ್ಕೂ ನನ್ನನ್ನು ಸಿಲುಕಿಸುವ ಕುತಂತ್ರ ಎನ್ನುವ ಸ್ವ ರಕ್ಷಣಾ ಆಟ ಆಡಿರುವುದಕ್ಕೂ ಸಂಬಂಧವಿರಬಹುದೇ ಎಂದು ರಾಜ್ಯ ಬಿಜೆಪಿ ಟ್ವಿಟರ್ ಖಾತೆಯಲ್ಲಿ ಪ್ರಶ್ನಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top