fbpx
ಸಮಾಚಾರ

ಕೆಜಿಎಫ್ ಹುಡುಗಿಗೆ ಕೂಡಿಬಂದ ಕಂಕಣಭಾಗ್ಯ: ಶೀಘ್ರದಲ್ಲೇ ಮದುವೆ

ಕೆಜಿಎಫ್ ಹಿಂದಿ ವರ್ಷನ್ ನ ಗಲಿಗಲಿ ಮೇ ಹಾಡಿಗೆ ಸೊಂಟ ಬಳುಕಿಸಿದ್ದ ನಟಿ ಗರ್ಲ್ ಮೌನಿ ರಾಯ್ ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ ಅನ್ನೋ ಸುದ್ದಿಯೊಂದು ಬಾಲಿವುಡ ಅಂಗಳದಲ್ಲಿ ಹರಿದಾಡುತ್ತಿದೆ. ಗೆಳೆಯ ಸೂರಜ್ ನಂಬಿಯಾರ್ ಜೊತೆ ಮೌನಿ ಮದುವೆ ನಡೆಯಲಿದೆ ಎಂಬ ಸುದ್ದಿ ಬಾಲಿವುಡ್ ನಾದ್ಯಂತ ಹರಿದಾಡುತ್ತಿದೆ.

ಮೌನಿ ಮತ್ತು ಸೂರಜ್ ಕಳೆದ ಕೆಲ ದಿನಗಳಿಂದ ಲಿವಿಂಗ್ ರಿಲೇಷನ್ ಶಿಪ್ ನಲ್ಲಿ ಇದ್ದರು ಈಗ ಮದುವೆಯಾಗಲು ನಿರ್ಧರಿಸಿದ್ದಾರೆ. ಹಾಗಾಗಿ ಇಬ್ಬರು ಎರಡೂ ಕುಟುಂಬಗಳ ಸದಸ್ಯರನ್ನ ಭೇಟಿಯಾಗುತ್ತಿದ್ದಾರೆ. ಮದುವೆ ಸಂಬಂಧ ಎರಡು ಕುಟುಂಬಸ್ಥರು ನಟಿ ಮಂದಿರಾ ಬೇಡಿ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಕುಟುಂಬಗಳಲ್ಲಿ ಮಾತುಕತೆ ನಡೆದಿದ್ದು, ಆದ್ರೆ ಇಬ್ಬರು ಎಲ್ಲಿಯೂ ಮದುವೆ ಆಗುತ್ತಿರುವ ವಿಷಯವನ್ನ ಹೇಳಿಕೊಂಡಿಲ್ಲ. ಇದಕ್ಕೂ ಮೊದಲು ಮೋಹಿತ್ ರೈನಾ ಜೊತೆ ಮೌನಿ ರಾಯ್ ಹೆಸರು ಕೇಳಿ ಬಂದಿತ್ತು. ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಬ್ರೇಕಪ್ ಮಾಡಿಕೊಂಡು ಪ್ರತ್ಯೇಕವಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top