fbpx
ಸಮಾಚಾರ

ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ: ಮತ್ತೊಂದು ವಿಡಿಯೋ ರಿಲೀಸ್

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣ ದಿನಕ್ಕೊಂದು ರೋಚಕ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದೆ. ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಸಂತ್ರಸ್ತೆ ವಿಡಿಯೋ ಬಿಡುಗಡೆ ಮಾಡಿ ತಮಗೆ ರಕ್ಷಣೆ ನೀಡಬೇಕು ಎಂದು ಗೃಹಸಚಿವರಲ್ಲಿ ಮನವಿ ಮಾಡಿಕೊಂಡಿದ್ದರು. ಇದೀಗ ಸಿ.ಡಿ ಪ್ರಕರಣದ ಸೂತ್ರದಾರ ಎಂದು ಹೇಳಲಾಗುತ್ತಿರುವ ಭವಿತ್ ಅವರು ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿದ್ದಾರೆ.

 

 

ಮಾಧ್ಯಮಗಳಲ್ಲಿ ನನ್ನ ಬಗ್ಗೆ ಸುದ್ದಿ ಪ್ರಸಾರ ಆಗುತ್ತಿರುವ ಬಗ್ಗೆ 2 ನಿಮಿಷಗಳ ವಿಡಿಯೋ ಮಾಡಿರುವ ಅವರು, ಸಿಡಿ ಕೇಸ್‌ನಲ್ಲಿ ನಾನು ಪಾತ್ರದಾರಿ ಅಲ್ಲ. ನಾನು ಇದರಲ್ಲಿ ಭಾಗಿಯೂ ಆಗಿಲ್ಲ ಎಂದು ಸಿಡಿ ಕೇಸ್ ಶಂಕಿತ ಭವಿತ್ ಎಂಬುವರು ಅಜ್ಞಾತ ಸ್ಥಳದಿಮದ ವಿಡಿಯೋ ರಿಲೀಸ್ ಮಾಡಿದ್ದಾರೆ. ನನ್ನ ಕುಟುಂಬಕ್ಕೆ ಇದರಿಂ ಆಘಾತವಾಗಿದೆ. ನಾನು ವಿಚಾರಣೆಗೆ ಹಾಝರಾಗುತ್ತಿದ್ದೇನೆ ಎಂದು ಭವಿತ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

 

 

“ನಾನು ಸಿಡಿ ಸೂತ್ರಧಾರ, ಕಿಂಗ್ ಪೀನ್ ಎಂದೆಲ್ಲಾ ಸುದ್ದಿವಾಹಿನಿಗಳು ಪ್ರಸಾರ ಮಾಡುತ್ತಿವೆ. ಆದರೆ ಅದೆಲ್ಲ ಶುದ್ಧಸುಳ್ಳು. ನನಗೂ ಸಿ.ಡಿ ಪ್ರಕರಣಕ್ಕೂ ಯಾವುದೇ ಸಂಭಂದ ಇಲ್ಲ. ಈ ಬಗ್ಗೆ ಈಗಾಗಲೇ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದೇನೆ. ಪೊಲೀಸರು ನನ್ನನ್ನು ವಿಚಾರಣೆಗೆ ಕರೆದಿದ್ದರು ನಾನು ಹಾಜರಾಗಿದ್ದೇನೆ. ಈಗ ಮಾಧ್ಯಮಗಳಲ್ಲಿ ನಾನು ತಲೆಮರೆಸಿಕೊಂಡಿದ್ದೇನೆ ಎಂದು ಹೇಳಲಾಗುತ್ತಿದೆ, ನೆನೆಲ್ಲಿಯೂ ತಲೆಮರೆಸಿಕೊಂಡು ಹೋಗಿಲ್ಲ ನಾನು ಮನೆಯಲ್ಲಿಯೇ ಇದ್ದೇನೆ. “ಎಂದು ತಿಳಿಸಿದ್ದಾರೆ.

“ಸದ್ಯ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು ಪೊಲೀಸರ ವರದಿ ಬರೋವರೆಗೂ ತಾಳ್ಮೆಯಿಂದ ಇರಿ ಅಲ್ಲಿಯವರೆಗೂ ಈ ರೀತಿ ಅಪಪ್ರಚಾರ ಮಾಡುವುದು ತಪ್ಪು. ನನಗೂ ಕೂಡ ಒಂದು ಕುಟುಂಬವಿದೆ. ನನ್ನ ತಾಯಿ ಹಾರ್ಟ್ ಪೇಶೆಂಟ್ ಕೂಡ ಹೌದು. ಒಮ್ಮೆ ನನ್ನ ಮನೆಯ ಪರಿಸ್ಥಿತಿ ನೋಡಿ ನನ್ನ ಕುಟುಂಬವನ್ನು ನೋಡಿ. ಒಬ್ಬರ ಜೀವನ ಹಾಳು ಮಾಡುವುದು ಸರಿಯಲ್ಲ” ಎಂದು ವಿನಂತಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top