fbpx
ಸಮಾಚಾರ

ಮತ್ತೊಮ್ಮೆ ಕನ್ನಡಾಭಿಮಾನ ಮೆರೆಯುವ ಮೂಲಕ ಕನ್ನಡಿಗರ ಮನಗೆದ್ದ ಅನುಷ್ಕಾ ಶೆಟ್ಟಿ

ಯೋಗ ಯೋಗ್ಯತೆ ಇದ್ದವರಿಗೆ ಮಾತ್ರ ಕನ್ನಡದ ವ್ಯಾಲ್ಯೂ ಏನು ಅನ್ನೋದು ಗೊತ್ತಾಗುತ್ತೆ ಎಂಬುದನ್ನು ಅನುಷ್ಕಾ ಶೆಟ್ಟಿ ನೋಡಿ ಜುಜುಬಿ ನಟಿಯರು ಕಲಿಯಬೇಕು. ಏಕೆಂದರೆ ಕರ್ನಾಟಕದಲ್ಲಿ ಹುಟ್ಟಿ ಕನ್ನಡದ ಅನ್ನವನ್ನು ತಿನ್ನುತ್ತ ಕನ್ನಡದ ಸಿನಿಮಾಗಳ ಮೂಲಕೆ ಪ್ರವರ್ಧಮಾನಕ್ಕೆ ಬಂದರೂ “ನನಗೆ ಕನ್ನಡ ಸರಿಯಾಗಿ ಬರೋದಿಲ್ಲ” ಅಂತ ಡವ್ ಮಾಡುವ ನಟಿಯರೇ ಹೆಚ್ಚು. ಈ ಮದ್ಯೆ ಕನ್ನಡತಿಯಾಗಿ ಹುಟ್ಟಿ ಒಂದೂ ಕನ್ನಡದ ಸಿನಿಮಾಗಳಲ್ಲಿ ನಟಿಸದಿದ್ದರೂ ಸಹ ಭಾರತದ ಸ್ಟಾರ್ ನಟಿ ಕನ್ನಡ ಪ್ರೇಮವನ್ನು ಮೆರೆಯುತ್ತಿರುತ್ತಲೇ ಇರುತ್ತಾರೆ.

 

 

ತೆಲುಗು, ತಮಿಳಿನಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ಅನುಷ್ಕಾ ಶೆಟ್ಟಿ ಎಲ್ಲೇ ಇದ್ದರೂ ಕನ್ನಡತನವನ್ನು ಬಿಟ್ಟುಕೊಡದೇ ಕನ್ನಡವನ್ನು ಮರೆಯದೇ ಉಸಿರಾಗಿಸಿಕೊಂಡಿದ್ದಾರೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ವಿಷಯ ಏನಂದ್ರೆ ತಮ್ಮ ತಂದೆ-ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಕನ್ನಡದಲ್ಲಿ ಶುಭಹಾರೈಸುವ ಮೂಲಕ ಮತ್ತೆ ಕರುನಾಡಿನ ಜನತೆಯ ಮನ ಗೆದ್ದಿದ್ದಾರೆ.

ವಾಸ್ತವವಾಗಿ ಮಾರ್ಚ್ 16ರಂದು ನಟಿ ಅನುಷ್ಕಾ ಶೆಟ್ಟಿ ಅವರ ತಂದೆ ವಿಠಲ ಶೆಟ್ಟಿ ಮತ್ತು ತಾಯಿ ಪ್ರಫುಲ್ಲ ಅವರ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಹೆತ್ತವರಿಗೆ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡಿದ ಅನುಷ್ಕಾ ಮದುವೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ಪಪ್ಪ ಮತ್ತು ಅಮ್ಮ ಎಂದು ಬರೆದಿದ್ದಾರೆ.

ಈ ಹಿಂದೆ ವಿಶೇಷ ಸಂದರ್ಭಗಳಲ್ಲಿ ಅನೇಕ ಭಾರಿ ಸೋಶಿಯಲ್ ಮೀಡಿಯಾದಲ್ಲಿ ಕನ್ನಡದಲ್ಲಿಯೇ ಪೋಸ್ಟ್ ಮಾಡಿದ್ದ ಅನುಷ್ಕಾ ಶೆಟ್ಟಿ ಅವರ ಕನ್ನಡಾಭಿಮಾನ ನಿಷ್ಕಲ್ಮಷವಾದದ್ದು. ಎಷ್ಟೇ ದೊಡ್ಡವರಾಗಿ ಬೆಳೆದರೂ ಕನ್ನಡ ಮರೆಯದ ಅನುಷ್ಕಾ ಶೆಟ್ಟಿ ಅವರ ಕನ್ನಡಾಭಿಮಾನಕ್ಕೆ ಕನ್ನಡಿಗರು ಸಲಾಂ ಹೊಡೆಯುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top