fbpx
ಸಮಾಚಾರ

ಬಿಗ್‌ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಪ್ರಶಾಂತ್ ಸಂಬರಗಿ! ಕಾರಣ ಏನು?

ಬಿಗ್​ ಬಾಸ್ ಸೀಸನ್ 8ರ ಮನೆ ಸೇರಿದ ಸ್ಪರ್ಧಿಗಳು ಮೂರನೇ ವಾರವನ್ನು ಕಳೆಯುತ್ತಿದ್ದಾರೆ. ಈ ಅವಧಿಯಲ್ಲಿ ಅವರು ಯಾರಿಗೂ ಹೊರ ಜಗತ್ತಿನ ಸಂಪರ್ಕ ಇಲ್ಲ. ಮನೆಯಲ್ಲಿ ಸದಾ ನೇರ ಮಾತುಗಳಿಂದ ಗಮನಸೆಳೆಯುತ್ತಿದ್ದ ಪ್ರಶಾಂತ್ ಸಂಬರಗಿ ಅವರು ಬಿಗ್ ಬಾಸ್ ಮುಂದೆ ಗಳಗಳನೆ ಅತ್ತಿದ್ದಾರೆ. ಇದಕ್ಕೆ ಕಾರಣ ಕೂಡ ನೀಡಿದ್ದಾರೆ. ಯಾಕೆ ಪ್ರಶಾಂತ್ ಕಣ್ಣೀರು ಹಾಕಿದ್ದಾರೆ ಅಂತೀರಾ? ಮುಂದೆ ಓದಿ

 

 

ಕಳೆದ ವಾರ ಪ್ರಶಾಂತ್ ಅವರ ಧ್ವನಿ ಕೆಟ್ಟಿತ್ತು ಇದನ್ನು ಟಿವಿಯಲ್ಲಿ ನೋಡಿ ಗಮನಿಸಿದ್ದ ಅವರ ಪತ್ನಿ ಬಿಗ್ ಬಾಸ್ ಮನೆಗೆ ಔಷಧಿಯನ್ನು ಕಳಿಸಿಕೊಟ್ಟಿದ್ದಾರೆ, ಇದನ್ನು ಸೇವಿಸಿದ ನಂತರದಲ್ಲಿ ಅವರ ಧ್ವನಿ ಸರಿ ಹೋಗಿದೆ. ಅವರ ಆರೋಗ್ಯದ ಬಗ್ಗೆ ಕೇಳಲು ಬಿಗ್ ಬಾಸ್ ಪ್ರಶಾಂತ್‌ರನ್ನು ಕನ್ಫೆಶನ್ ರೂಮ್‌ಗೆ ಕರೆದಿದ್ದರು. ಆಗ ಪ್ರಶಾಂತ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಪತ್ನಿ ಪ್ರೀತಿ ಅವರನ್ನು ಭಾವುಕರನ್ನಾಗಿಸಿದೆ.

“ನನ್ನ ಪತ್ನಿ ಆಯುರ್ವೇದಿಕ್​ ವೈದ್ಯೆ. ಅವರಿಗೆ ನನ್ನ ಧ್ವನಿ ಹೋಗಿರುವುದು ನೋಡಿ ಔಷಧ ಕಳುಹಿಸಿಕೊಟ್ಟಿದ್ದಾರೆ. ಅವರು ಮನೆಯಲ್ಲೇ ಕೂತು ನನ್ನ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ. ಇಷ್ಟು ದಿನ ಅವರ ನೆನಪು ಆಗುತ್ತಾ ಇರಲಿಲ್ಲ. ಈಗ ಔಷಧ ಕಳುಹಿಸಿಕೊಟ್ಟಿದ್ದರಿಂದ ಅವಳ ನೆನಪಾಗುತ್ತಿದೆ” ಎಂದು ಬಿಕ್ಕಿ ಬಿಕ್ಕಿ ಅತ್ತರು ಪ್ರಶಾಂತ್ ಸಂಭರ್ಗಿ. ನಂತರ ಕಣ್ಣು ಒರಿಸಿಕೊಂಡು ಸುಧಾರಿಸಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top