fbpx
ಸಮಾಚಾರ

ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ ನಟಿ ರಮ್ಯಾ

ಕನ್ನಡ ಚಿತ್ರರಂಗದಲ್ಲಿ ಮೋಹಕ ತಾರೆ, ಸ್ಯಾಂಡಲ್ ವುಡ್ ಕ್ವೀನ್ ಅಂತಲೇ ಕರೆಸಿಕೊಂಡು ಬೇಡಿಕೆ ಇರುವಾಗಲೇ ರಾಜಕಾರಣದಲ್ಲಿ ಕಳೆದು ಹೋದವರು ನಟಿ ರಮ್ಯಾ. ಆದರೆ ಖುದ್ದು ಕಾಂಗ್ರೆಸ್ ಕಾರ್ಯಕರ್ತರಿಗೇ ಆಕೆಯ ರಾಜಕೀಯ ನಡೆ ಏನು ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣಗಳಿಲ್ಲ.. ಆ ವಿಷ್ಯ ಹಾಗಿರಲಿ, ಇದೀಗ ರಮ್ಯಾ ಬೆಂಬಲಿಗರಿಗೆ ಮತ್ತು ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ನೀಡಿದ್ದಾರೆ. ಏನದು ಅಂತೀರಾ? ಮುಂದೆ ಓದಿ.

ಲೋಕಸಭೆ ಚುನಾವಣೆ ಬಳಿಕ ತಮ್ಮ ಎಲ್ಲ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದ ರಮ್ಯಾ ‘ಸಾಮಾಜಿಕ ಜೀವನ’ದಿಂದ ದೂರ ಉಳಿದಿದ್ದರು. ಆ ನಂತರ ಹಠಾತ್ತನೇ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷವಾಗಿ ಅಭಿಮಾನಿಗಳಿಗೆ ಖುಷಿ ನೀಡಿದ್ದರು. ಮೊದಲಿನ ರೀತಿ ಸಕ್ರಿಯವಾಗಿಲ್ಲದಿದ್ದರೂ ಆಗಾಗ್ಗೆ ಒಂದೊಂದು ಪೋಸ್ಟ್ ಹಾಕುತ್ತಾ ತಮ್ಮ ಅಭಿಮಾನಿಗಳಿಗೆ ಅಪ್ ಡೇಟ್ ಕೊಡುತ್ತಾ ಬಂದಿದ್ದರು.

ಸೋಷಿಯಲ್ ಮೀಡಿಯಾದಿಂದ ರಮ್ಯಾ ಮತ್ತೆ ದೂರ
ಆದರೆ ಇದೀಗ ರಮ್ಯಾ ಅವರು ಮತ್ತೊಮ್ಮೆ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಇದ್ದಕ್ಕಿಂತ ಸೋಷಿಯಲ್ ಮೀಡೀಯಾ ಖಾತೆಗಳನ್ನು ನಿಷ್ಕ್ರಿಯ ಗೊಳಿಸಿರುವುದು ರಮ್ಯಾ ಅಭಿಮಾನಿಗಳಿಗೆ ಶಾಕ್ ನೀಡಿದೆ. ಇನ್ನು ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಷ್ಕ್ರಿಯಗೊಳಿಸಿರುವ ರಮ್ಯಾರ ಈ ನಡೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top