fbpx
ಸಮಾಚಾರ

ಹರಿಜನ ಶಾಲಾ ಮಕ್ಕಳ ಕಣ್ಣೀರಿಗೆ ಕರಗಿದ ಕಿಚ್ಚ! ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸಕಲ ನೆರವು ಘೋಷಣೆ

ಶಾಲೆಯಲ್ಲಿನ ಮೇಜು ಹಾಗೂ ಬೆಂಚ್​ಗಳನ್ನು ಹೊರಗಡೆ ಹಾಕಿದರೆ ನಾವು ಎಲ್ಲಿ ಕುಳಿತು ಪಾಠ ಕೇಳಬೇಕು. ನಮ್ಮನ್ನು ಓದಲು ಬಿಡಿ. ನಾನು ಚೆನ್ನಾಗಿ ಓದಿ ಪೊಲೀಸ್ ಆಗಬೇಕು ಎಂದು ಇದ್ದೇನೆ ಹೇಗಾದರೂ ಮಾಡಿ ನಮ್ಮ ಶಾಲೆಯನ್ನು ನಮಗೆ ಉಳಿಸಿಕೊಡಿ ಎಂಬ ಕನ್ನಡ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಸಂಜನಾ ಅಳಲಿಗೆ ಮರುಗಿ ನಟ ಕಿಚ್ಚ ಸುದೀಪ್​ ಮಕ್ಕಳ ಕಷ್ಟಕ್ಕೆ ನೆರವಾಗಿದ್ದಾರೆ.

 

 

ಗಾಂಧಿವಾಡ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ, ಅನುದಾನಿತ ಹರಿಜನ ಶಾಲೆಗೆ 30 ವರ್ಷಗಳ ಅವಧಿಗೆ ಜಾಗ ಲೀಸ್‌ ನೀಡಿತ್ತು. ಈ ಅವಧಿ ಪೂರ್ಣಗೊಂಡಿದ್ದು ಜಾಗ ಬಿಟ್ಟುಕೊಡಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ. ಇದರಿಂದಾಗಿ ಮಕ್ಕಳ ಹಾಗೂ ಶಿಕ್ಷಕರ ಭವಿಷ್ಯ ಅತಂತ್ರವಾಗಿತ್ತು.

ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ನೋಡಿ ನಟ ಸುದೀಪ್‌ ಶಾಲೆಗೆ ನೆರವು ನೀಡುವುದಾಗಿ ಘೋಷಿಸಿದ್ದರು. ವಸ್ತು ಸ್ಥಿತಿ ಪರಿಶೀಲನೆಗೆ ಕಿಚ್ಚ ಸುದೀಪ್ ಚಾರಿಟಬಲ್‌ ಸೊಸೈಟಿಯ ಅಧ್ಯಕ್ಷ ರಮೇಶ್ ಮತ್ತು ನಿರ್ದೇಶಕರಾದ ನಾಗೇಂದ್ರ ಹಾಗೂ ಇನ್ನಿತರರು ಬುಧವಾರ ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿಗಳು, ಸ್ಥಳೀಯರು ಮತ್ತು ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಿದರು.

 

 

ಕಿಚ್ಚ ಸುದೀಪ್ ಸ್ಪಂದನೆಗೆ ಶಾಲಾ ಮಕ್ಕಳೂ ಮಿಡಿದಿದ್ದಾರೆ. ತಮ್ಮ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿರೋದಕ್ಕೆ ಸುದೀಪ್ ಮತ್ತವರ ತಂಡಕ್ಕೆ ವಿದ್ಯಾರ್ಥಿಗಳು ಧನ್ಯವಾದ ತಿಳಿಸಿದ್ದಾರೆ. ಸದ್ಯಕ್ಕೆ ರಾಮನಗರ ಬಡಾವಣೆಯಲ್ಲಿರೋ ಕಿಂಗ್ಸ್ ಕಿಡ್ಸ್ ಪ್ರಿ ಸ್ಕೂಲ್ ನಲ್ಲಿ ಮಕ್ಕಳಿಗೆ ತಾತ್ಪೂರ್ತಿಕ ವ್ಯವಸ್ಥೆ ಮಾಡಲಾಗಿದೆ. ವಿಡಿಯೋ ಕಾಲ್ ಮೂಲಕ ವಿದ್ಯಾರ್ಥಿಗಳ ಬಳಿ ಸುದೀಪ್ ಮಾತನಾಡಿ ಧೈರ್ಯ ತುಂಬಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top