ಕೋವಿಡ್ 19 ಹೆಮ್ಮಾರಿಯ ವಿರುದ್ದ ಹೋರಾಡಲು ಭಾರತ ಸಂಕಷ್ಟದಲ್ಲಿರುವ ಇತರೆ ರಾಷ್ಟ್ರಗಳಿಗೂ ಕೋವಿಡ್ ಲಸಿಕೆ ನೀಡುವ ಮೂಲಕ ಮಾನವೀಯತೆ ಮರೆಯುತ್ತಿದೆ. ಕೆಲವು ದಿನಗಳ ಹಿಂದಷ್ಟೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೆರಿಬಿಯನ್ನರಿಗೆ 50 ಸಾವಿರ ಕೋವಿಡ್ ಲಸಿಕೆಯನ್ನು ಕಳಿಸಿಕೊಟ್ಟಿತ್ತು. ಇದೀಗ ಜಮೈಕಾ ಕ್ರಿಕೆಟಿಗರು ಭಾರತ ಹಾಗೂ ಪ್ರಧಾನಿ ಮೋದಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
Jamaican cricketer Chris Gayle thanks India for sending COVID19 vaccines to Jamaica
"PM Modi, the Government of India and the people of India, I want to thank you all for your donation of the vaccine to Jamaica. We appreciate it," he says pic.twitter.com/8iSa3yhYcs
— ANI (@ANI) March 19, 2021
ತಮ್ಮ ದೇಶವಾದ ಜಮೈಕಾಕ್ಕೆ ಕೊರೊನಾ ಲಸಿಕೆ ನೀಡಿದ್ದಕ್ಕಾಗಿ ವೆಸ್ಟ್ ಇಂಡೀಸ್ ತಂಡದ ಕ್ರಿಕೆಟಿಗ ಕ್ರಿಸ್ ಗೇಲ್ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ್ದಾರೆ. ಈ ಬಗ್ಗೆ ಚಿಕ್ಕ ವಿಡಿಯೋವೊಂದನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಕೊರೋನಾ ವಿರುದ್ದ ಹೋರಾಡಲು ಜಮೈಕಾದ ಜನತೆಗೆ ಕೋವಿಡ್ ಲಸಿಕೆಯನ್ನು ದೇಣಿಗೆಯಾಗಿ ನೀಡಿದ ಪ್ರಧಾನಿ ಮೋದಿ, ಭಾರತ ಸರ್ಕಾರ ಹಾಗೂ ಭಾರತದ ಜನತೆಗೆ ಧನ್ಯವಾದಗಳು. ನಾವಿದನ್ನು ಪ್ರಶಂಸಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
“ಪಿಎಂ ಮೋದಿ, ಭಾರತ ಸರ್ಕಾರ ಮತ್ತು ಭಾರತದ ಜನರು, ಲಸಿಕೆ ಜಮೈಕಾಗೆ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾವು ಅದನ್ನು ಪ್ರಶಂಸಿಸುತ್ತೇವೆ” ಎಂದು ಕ್ರಿಶ್ ಗೇಲ್ ವಿಡಿಯೋದಲ್ಲಿ ಹೇಳುತ್ತಾರೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
